HEALTH TIPS

ಕೊರೋನಾ ಲಸಿಕೆ ಎಷ್ಟು ತಿಂಗಳ ಕಾಲ ಸೋಂಕಿನಿಂದ ರಕ್ಷಣೆ ನೀಡುತ್ತದೆ? ಏಮ್ಸ್ ನಿರ್ದೇಶಕ ಗುಲೇರಿಯಾ ಹೇಳಿದ್ದೇನು?

          ನವದೆಹಲಿ: ದೇಶದಲ್ಲಿ ಮತ್ತೆ ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿರುವಂತೆಯೇ ಇತ್ತ ಕೋವಿಡ್ ಲಸಿಕೆಗಳತ್ತ ಜನ ಮನಸ್ಸು ಮಾಡತೊಡಗಿದ್ದಾರೆ. ಅದರೆ ಇಷ್ಟಕ್ಕೂ ಈ ಕೋವಿಡ್ ಲಸಿಕೆಗಳು ಎಷ್ಟು ತಿಂಗಳ ಕಾಲ ಸೋಂಕಿನಿಂದ ರಕ್ಷಣೆ ನೀಡುತ್ತದೆ ಗೊತ್ತಾ? ಇಲ್ಲಿದೆ ಮಾಹಿತಿ


        ಮಹಾರಾಷ್ಟ್ರ, ಗುಜರಾತ್ ಪಂಜಾಬ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಾರಕ ಕೊರೋನಾ ವೈರಸ್ ಅಟ್ಟಹಾಸ ಮತ್ತೆ ತಾರಕ್ಕೇರಿದ್ದು, ಮತ್ತೆ ಕೊರೋನಾ ಆರಂಭಿಕ ದಿನಗಳನ್ನು ನೆನಪಿಸುವಂತೆ ನಿತ್ಯ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಇದರ ನಡುವೆ ಕೋವಿಡ್ ಲಸಿಕೆಗಳ ಮೇಲಿನ ಬೇಡಿಕೆ ಕೂಡ ಕ್ರಮೇಣ ಏರತೊಡಗಿದೆ.

      ಆದರೆ ಈ ಕೋವಿಡ್ ಲಸಿಕೆಗಳು ಎಷ್ಟು ಸಮಯದವರೆಗೆ ಸೋಂಕಿನಿಂದ ರಕ್ಷಣೆ ನೀಡಬಲ್ಲದು. ಈ ಪ್ರಶ್ನೆಗೆ ದೆಹಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಮಾಹಿತಿ ನೀಡಿದ್ದಾರೆ. ಗುಲೇರಿಯಾ ಅವರು ಅಭಿಪ್ರಾಯಪಟ್ಟಿರುವಂತೆ ಕೋವಿಡ್ -19 ಲಸಿಕೆಗಳು ಎಂಟು ರಿಂದ ಹತ್ತು ತಿಂಗಳಕಾಲ ಸೋಂಕಿನಿಂದ ಉತ್ತಮ ರಕ್ಷಣೆ ನೀಡುತ್ತವೆ ಎಂದು ಹೇಳಿದ್ದಾರೆ.

        ಐಪಿಎಸ್ (ಕೇಂದ್ರ) ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಲೇರಿಯಾ ಅವರು, 'ಲಸಿಕೆಯ ಯಾವುದೇ ಪ್ರಮುಖ ಅಡ್ಡಪರಿಣಾಮಗಳು ದಾಖಲಾಗಿಲ್ಲ ಎಂದು ಹೇಳಿರುವ ಅವರು, ಕೋವಿಡ್ ಲಸಿಕೆ ಎಂಟು ರಿಂದ ಹತ್ತು ತಿಂಗಳವರೆಗೆ ಸೋಂಕಿನಿಂದ ಉತ್ತಮ ರಕ್ಷಣೆ ನೀಡಲು ಸಾಧ್ಯವಾಗುತ್ತದೆ ಮತ್ತು ಈ ಅವಧಿ ಇನ್ನೂ ಹೆಚ್ಚಿನದಾಗಿರಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ದೇಶದಲ್ಲಿ ಕೋವಿಡ್ ಉಲ್ಬಣಕ್ಕೆ ಕಾರಣ ನೀಡಿದ ಗುಲೇರಿಯಾ ಅವರು, ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಅನೇಕ ಕಾರಣಗಳಿವೆ. ಅದರಲ್ಲಿ ದೊಡ್ಡ ಮತ್ತ ಪ್ರಮುಖ ಕಾರಣವೆಂದರೆ ಸಾಂಕ್ರಾಮಿಕ ರೋಗವು ಮುಗಿದಿದೆ ಎಂದು ಜನರು ಭಾವಿಸುತ್ತಿರುವುದು. ಭಯವೇ ಇಲ್ಲದಂತೆ ಜನ ರಾಜಾರೋಷವಾಗಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ತಿರುಗಾಡುತ್ತಿದ್ದಾರೆ. ಇದೂ ಕೂಡ ಸೋಂಕಿತರ ಸಂಖ್ಯೆ ಉಲ್ಬಣಕ್ಕೆ ಕಾರಣ. ಕೆಲವು ಸಮಯದವರೆಗೆ ಅನಿವಾರ್ಯವಲ್ಲದ ಪ್ರಯಾಣವನ್ನು ನಿರ್ಬಂಧಿಸಬೇಕು ಎಂದು ಮನವಿ ಮಾಡಿಕೊಂಡ ಗುಲೇರಿಯಾ ಅವರು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದನ್ನು ಯಾವುದೇ ಕಾರಣಕ್ಕೂ ಜನ ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.

      ಲಸಿಕೆಗಳು ಅನಿಯಮಿತವಾಗಿ ದೊರೆತರೆ ಖಂಡಿತಾ ದೇಶದ ಪ್ರತೀಯೊಬ್ಬ ನಾಗರೀಕನಿಗೂ ಲಸಿಕೆ 
ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನೀತಿ ಆಯೋದ ಸದಸ್ಯ (ಆರೋಗ್ಯ) ವಿಕೆ ಪಾಲ್ ಅವರು, ಕೊರೋನ ಸೋಂಕು ಪ್ರಸರಣ ಸರಪಳಿಯನ್ನು ನಿಲ್ಲಿಸಬೇಕಾಗಿದೆ ಎಂದು ಹೇಳಿದ್ದಾರೆ. ಕೋವಿಡ್ ನಿಯಮಾವಳಿಗಳನ್ನು ಅನುಸರಿಸದಿರುವುದು ಮತ್ತು ನಿಯಮಾವಳಿ ಸಡಿಲತೆಯು ಕೂಡ ಸೋಂಕು ಉಲ್ಬಣಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಹೆಚ್ಚಿನ ಜನರಿಗೆ ಲಸಿಕೆ ನೀಡುವ ಪ್ರಶ್ನೆಗೆ ಉತ್ತರಿಸಿದ ಪಾಲ್, ಲಸಿಕೆಗಳು ಸೀಮಿತವಾಗಿವೆ ಮತ್ತು ಅದಕ್ಕಾಗಿಯೇ ಆದ್ಯತೆ ಮೇರೆಗೆ ನೀಡಲಾಗುತ್ತಿದೆ. ಒಂದು ವೇಳೆ ಲಸಿಕೆಗಳು ಅನಿಯಮಿತವಾಗಿ ದೊರೆತರೆ ಖಂಡಿತಾ ದೇಶದ ಪ್ರತೀಯೊಬ್ಬ ನಾಗರೀಕನಿಗೂ ಲಸಿಕೆ ನೀಡುತ್ತೇವೆ ಎಂದು ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries