ತಿರುವನಂತಪುರ: ವಿಧಾನಸಭಾ ಚುನಾವಣೆಗೆ ಉಳಿದ ಏಳು ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ. ವೀಣ ನಾಯರ್ ಅವರು ವಟ್ಟಿಯೂಕಾವಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಕುಂಡರದಲ್ಲಿ ಪಿ.ಸಿ. ವಿಷ್ಣುನಾಥ್ ಸ್ಪರ್ಧಿಸಲಿದ್ದಾರೆ. ಕಲ್ಪೆಟ್ಟದಿಂದ ಟಿ ಸಿದ್ದೀಕ್, ನೀಲಂಬೂರಿನಲ್ಲಿ ವಿ.ವಿ.ಪ್ರಕಾಶ್ ಮತ್ತು ತವನೂರಿನಿಂದ ಫಿರೋಜ್ ಕುನ್ನಂಪರಂಬಿಲ್ ಸ್ಪರ್ಧಿಸಲಿದ್ದಾರೆ.
ಪಟ್ಟಾಂಬಿಯಲ್ಲಿ ರಿಯಾಜ್ ಮುಕೋಲಿ ಅಭ್ಯರ್ಥಿಯಾಗಿದ್ದಾರೆ. ಅಭ್ಯರ್ಥಿಯ ನಿರ್ಧಾರದ ಬಗ್ಗೆ ವಿವಾದದಲ್ಲಿದ್ದ ಇರಿಕೂರ್ ನಲ್ಲಿ ಘೋಷಿಸಿದ ಅಭ್ಯರ್ಥಿಯನ್ನು ಬದಲಾಯಿಸಲಾಗುವುದಿಲ್ಲ. ಧರ್ಮಡಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ವಲಾಯರ್ ಸಂತ್ರಸ್ಥೆ ಬಾಲಕಿಯ ತಾಯಿಯನ್ನು ಯು.ಡಿ.ಎಫ್ ಬೆಂಬಲಿಸಬಹುದು. ಯುಡಿಎಫ್ ತನ್ನ ಬೆಂಬಲ ನೀಡಿದರೆ ಒಪ್ಪುತ್ತೇನೆ ಎಂದು ವಲಾಯರ್ ನಲ್ಲಿ ಕೊಲೆಯಾದ ಬಾಲಕಿಯ ತಾಯಿ ಹೇಳಿದ್ದರು.