ಕಾಸರಗೋಡು: ವಿಧಾನಸಭೆ ಚುನಾವಣೆಯ ಪೂರ್ವಭಾವಿಯಾಗಿ ಕಾಸರಗೋಡುಜಿಲ್ಲೆಯ ಪತ್ರಕರ್ತರಿಗಾಗಿ ಜಿಲ್ಲಾ ಮೀಡಿಯಾ ಸರ್ಟಿಫಿಕೇಷನ್ ಆಂಡ್ ಮಾನಿಟರಿಂಗ್ ಸಮಿತಿ ವತಿಯಿಂದ ಮಾಧ್ಯಮ ಕಾರ್ಯಾಗಾರ ಬುಧವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು.
ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮುದ್ರಣ, ದೃಶ್ಯ, ಶ್ರವ್ಯ, ಅಂತರ್ಜಾಲ ಮಾಧ್ಯಮಗಳು ಚುನಾವಣೆ ಸಂಬಮಧ ವರದಿಗಳನ್ನು ಪ್ರಕಟಿಸುವ ವೇಳೆ ಕೈಗೊಳ್ಳಬೇಕಾದ ಜಾಗ್ರತೆಗಳ, ಚುನಾವಣೆ ನೀತಿ ಸಂಹಿತೆಗಳ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಎಂ.ಸಿ.ಎಂ.ಸಿ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ಆರಂಭಿಸಿದ್ದು, ನೀತಿ ಸಂಹಿತೆ ಉಲ್ಲಂಘಿಸುವ ವರದಿಗಳ ಬಗ್ಗೆ ನಿಗಾ ಇರಿಸುತ್ತಿದೆ ಎಂದು ಅವರು ತಿಳಿಸಿದರು.
ಚುನಾವಣೆ ವಿಭಾಗಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನಾರ್ಂಡಿಸ್, ಜಿಲ್ಲಾ ವಾರ್ತಧಿಕಾರಿ ಮಧುಸೂದನ್ ಎಂ. ವಿವಿಧ ಪತ್ರಕರ್ತರು ಉಪಸ್ಥಿತರಿದ್ದರು.