ತಿರುವನಂತಪುರ: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಶೋಭಾ ಸುರೇಂದ್ರನ್ ಪ್ರತಿಕ್ರಿಯಿಸಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರಲಿಲ್ಲ. ಈ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಈ ಹಿಂದೆ ಮಾಹಿತಿ ನೀಡಲಾಗಿತ್ತು ಎಂದಿರುವರು.
ಇದನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಲಾಗಿತ್ತು. ಆದರೆ ಕೇಂದ್ರ ನಾಯಕತ್ವ ಶೋಭಾ ಸ್ಪರ್ಧಿಸಬೇಕೆಂದು ಬಯಸಿತ್ತು. ಪಕ್ಷದ ಚುನಾವಣ ಅಭಿಯಾನದಲ್ಲಿ ಸಕ್ರಿಯರಾಗಲಿದ್ದೇನೆ ಎಂದು ಶೋಭಾ ಹೇಳಿದರು.
ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಸುವರ್ಣಾವಕಾಶ ಸಿಕ್ಕಿದೆ ಎಂದು ಶೋಭಾ ಸುರೇಂದ್ರನ್ ಹೇಳಿದ್ದಾರೆ. ಈ ಹಿಂದೆ ಬೇರೆ ಯಾವುದೇ ಹಿರಿಯ ಬಿಜೆಪಿ ನಾಯಕರಿಗೆ ಸಿಗದ ಅದೃಷ್ಟ ಸುರೇಂದ್ರನ್ ಅವರದಾಗಿದೆ. ಎರಡೂ ಸ್ಥಾನಗಳಲ್ಲಿ ಯಶಸ್ಸನ್ನು ಬಯಸುತ್ತೇನೆ ಎಂದು ಶೋಭ ಹೇಳಿದರು.