ತಿರುವನಂತಪುರ: ಕಿಫ್ಬಿ ಸಿಇಒ ಕೆ.ಎಂ ಅಬ್ರಹಾಂ ಮತ್ತು ಉಪ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಜೀತ್ ಸಿಂಗ್ ಅವರಿಗೆ ಜಾರಿ ನಿರ್ದೇಶನಾಲಯ ಬುಧವಾರ ನೋಟಿಸ್ ಜಾರಿಗೊಳಿಸಿದೆ. ಕೆಎಂ ಅಬ್ರಹಾಂ ಅವರಿಗೆ ಶುಕ್ರವಾರ ಹಾಜರಾಗುವಂತೆ ಇಡಿ ನೋಟಿಸ್ ಕಳುಹಿಸಿದೆ. ಕಿಫ್ಬಿಯ ಉಪ ವ್ಯವಸ್ಥಾಪಕ ನಿರ್ದೇಶಕರು ಇಂದು(ಗುರುವಾರ) ಹಾಜರಾಗಬೇಕು ಎಂದು ನೋಟಿಸ್ ತಿಳಿಸಿದೆ.
ಕಿಫ್ಬಿ ವಿರುದ್ಧ ಜಾರಿ ನಿರ್ದೇಶನಾಲಯ ಮಂಗಳವಾರ ಪ್ರಕರಣ ದಾಖಲಿಸಿತ್ತು. ಕಿಫ್ಬಿ ಯೋಜನೆಗಳಿಗಾಗಿ ಮಸಾಲಾ ಬಾಂಡ್‍ಗಳನ್ನು ವಿದೇಶದಲ್ಲಿ ಮಾರಾಟ ಮಾಡುವ ಬಗ್ಗೆ ಇಡಿ ವಿವರವಾದ ತನಿಖೆಗೆ ಸಿದ್ಧತೆ ನಡೆಸಿದೆ. ಕೇಂದ್ರ ಅನುಮೋದನೆ ಇಲ್ಲದೆ ವಿದೇಶಿ ಹಣವನ್ನು ಸ್ವೀಕರಿಸಿದ್ದಕ್ಕಾಗಿ ಇಡಿ ಕಿಫ್ ವಿರುದ್ಧ ಕ್ರಮ ಕೈಗೊಂಡಿದೆ. ಕಿಫ್ಬಿಯ ಬ್ಯಾಂಕಿಂಗ್ ಪಾಲುದಾರ ಆಕ್ಸಿಸ್ ಬ್ಯಾಂಕ್‍ಗೆ ಇಡಿ ನೋಟಿಸ್ ಕಳುಹಿಸಿದೆ. ಆಕ್ಸಿಸ್ ಸಗಟು ಬ್ಯಾಂಕಿಂಗ್ ಮುಖ್ಯಸ್ಥರಿಗೆ ಇಡಿ ನೋಟಿಸ್ ರವಾನಿಸಿದೆ.
ಸಿಎಜಿ ವರದಿಯ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದೆ. ಪ್ರಾಥಮಿಕ ತನಿಖೆಯ ಸಂದರ್ಭ ಇಡಿಯು ಕಿಫ್ಬಿಯ ಚಟುವಟಿಕೆಗಳಲ್ಲಿ ವ್ಯಾಪಕ ಅಕ್ರಮಗಳನ್ನು ಕಂಡುಹಿಡಿದಿದೆ. ವಿಧಾನಸಭಾ ಚುನಾವಣೆಗಳು ಹತ್ತಿರಗೊಳ್ಳುತ್ತಿರುವ ವೇಳೆಗೆ, ಇಡಿಯು ತನಿಖೆಗೆ ತೊಡಗಿರುವುದು ಸರ್ಕಾರಕ್ಕೆ ಹಿನ್ನಡೆಯಾಗಲಿದೆ.