ಬೆಂಗಳೂರು: ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ
ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿರುವ ಆದೇಶವನ್ನು ಮಾರ್ಪಾಡಿಸುವ ಪ್ರಸ್ತಾವನೆ ಇದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ನಿರ್ಬಂಧ ಆದೇಶ ಪ್ರಶ್ನಿಸಿ ಕಾಸರಗೋಡಿನ ವಕೀಲ ಬಿ.ಸುಬ್ಬಯ್ಯ ರೈ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ
ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿದಾಗ ಸರ್ಕಾರ ತನ್ನ ನಿಲುವುಗಳನ್ನು ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಯಾವುದೇ ರಸ್ತೆ ಮುಚ್ಚಲು ಅಥವಾ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲು ಕೇಂದ್ರ ಆದೇಶ ಮಾಡಿಲ್ಲ. ಆದರೆ, ಜಿಲ್ಲಾಡಳಿತಗಳು
ಕೋವಿಡ್ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಂತರ್ ರಾಜ್ಯ ಸಂಚಾರ ನಿರ್ಬಂಧಿಸುವಂತಿಲ್ಲ.
ಅದನ್ನು ರಾಜ್ಯ ಸರ್ಕಾರ ಪಾಲಿಸಬೇಕು. ಗಡಿಗಳನ್ನು ಮುಚ್ಚುವ ಬದಲು, ಸುಳ್ಯ, ಪುತ್ತೂರು, ಮಂಗಳೂರುಮತ್ತು ಕೊಡಗು ಮತ್ತಿತರೆ ಪ್ರದೇಶಗಳಲ್ಲಿ
ಚೆಕ್‌ಪೋಸ್ಟ್ ಬಳಿ ಹೊರ ರಾಜ್ಯಗಳಿಂದ ಬಂದವರ ಆರ್‌ಟಿಪಿಸಿಆರ್
ವರದಿ ಪರೀಕ್ಷಿಸುವ ವ್ಯವಸ್ಥೆ ಮಾಡಬೇಕು. ಆರ್‌ಟಿಪಿಸಿಆರ್ ನೆಗಟಿವ್ ಇದ್ದರೆ ರಾಜ್ಯದೊಳಗೆ ಸಂಚರಿಸಲು ಅನುಮತಿ ನೀಡಬೇಕು ಎಂದು ಸಲಹೆ ನೀಡಿತು.
ಈ ವೇಳೆ ರಾಜ್ಯ ಸರ್ಕಾರಿ ವಕೀಲರು, ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು
ಚೆಕ್‌ಪೋಸ್ಟ್‌ಗಳ ವೈದ್ಯಕೀಯ ತುರ್ತು ಸೇವೆ ಮತ್ತು ಆ್ಯಂಬುಲೆನ್ಸ್
ಸಂಚಾರಕ್ಕೆ ಮೂಲಕ ಅವಕಾಶ ಕಲ್ಪಿಸಿದೆ. ಸದ್ಯ ವಿಧಿಸಿರುವನಿರ್ಬಂಧವನ್ನು
ಮಾರ್ಪಡಿಸುವ ಪ್ರಸ್ತಾವನೆ ಇದೆ. ಆ ಕುರಿತ ಆದೇಶ ಸಲ್ಲಿಸಲು ಮಾ.9ರವರೆಗೆ ಕಾಲಾವಕಾಶ ನೀಡಬೇಕೆಂದು ಕೋರಿದರು.
ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಕೇರಳದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವಜನಿಕರ ಸಂಚಾರಕ್ಕೆ ವಿಧಿಸಿರುವ ನಿರ್ಬಂಧವನ್ನು ಮಾರ್ಪಾಡಿಸಲು ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.
ಕೋವಿಡ್ ಹಿನ್ನೆಲೆಯಲ್ಲಿ ಕೇರಳದ ಕಾಸರಗೂಡುಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಿ ಫೆ.18ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ಆದೇಶ ಹೊರಡಿಸಿದ್ದರು. ಇದರಿಂದ ಕಾಲೇಜು-ಶಾಲೆ, ವೈದ್ಯಕೀಯ
ಸೇವೆಗಳು ಮತ್ತು ವಾಣಿಜ್ಯ ಉದ್ದೇಶಗಳಿಗೆ ನಿತ್ಯ ದಕ್ಷಿಣ ಕನ್ನಡದ ಜಿಲ್ಲೆಯ
ಸುಳ್ಯ, ಪುತ್ತೂರು, ಮಂಗಳೂರು ಮತ್ತು ಕೊಡಗು ಮತ್ತಿತರೆ ಪ್ರದೇಶಗಳಲ್ಲಿ
ಸಂಚಾರ ಮಾಡುವ ಕೇರಳ-ಕರ್ನಾಟಕ ಗಡಿಭಾಗದ 80 ಸಾವಿರಕ್ಕೂ