ನವದೆಹಲಿ: ಭಾರತ ಸರ್ಕಾರದ ವಾರ್ತಾ ಶಾಖೆಯ ಪ್ರಧಾನ ಮಹಾ ನಿರ್ದೇಶಕರಾಗಿ ಜೈದೀಪ್ ಭಟ್ನಾಗರ್ ಅಧಿಕಾರ ವಹಿಸಿಕೊಂಡರು.
ಭಟ್ನಾಗರ್ ಅವರು 1986ರ ತಂಡದ ಭಾರತೀಯ ಸಮಾಚಾರ ಸೇವೆಯ ಅಧಿಕಾರಿ. ಈ ಮುನ್ನ ಅವರು ದೂರದರ್ಶನ ಸುದ್ದಿ ವಿಭಾಗದಲ್ಲಿ ಮತ್ತು ದೂರದರ್ಶನದ ಮಾರುಕಟ್ಟೆ, ವಾಣಿಜ್ಯ ಮತ್ತು ಮಾರಾಟ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಪ್ರಸಾರ ಭಾರತಿಯ ಪಶ್ಚಿಮ ಏಷ್ಯಾದ ವಿಶೇಷ ಬಾತ್ಮೀದಾರರಾಗಿ 20 ರಾಷ್ಟ್ರಗಳ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಆಕಾಶವಾಣಿ ಸುದ್ದಿ ಸೇವಾ ವಿಭಾಗದ ಮುಖ್ಯಸ್ಥರಾದರು. ಭಾರತೀಯ ಸಮೂಹ ಸಂವಹನ ಸಂಸ್ಥೆಯ ರಿಜಿಸ್ಟ್ರಾರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.