ನವದೆಹಲಿ: ಭಾರತ ಸಂಕೀರ್ಣ ಭದ್ರತೆ ಮತ್ತು ಸವಾಲುಗಳ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಷ್ಟ್ರೀಯ ಭದ್ರತೆ ಕಾರ್ಯತಂತ್ರ, ಉನ್ನತ ರಕ್ಷಣಾ ಕಾರ್ಯತಂತ್ರ ಮಾರ್ಗಸೂಚಿ, ರಚನಾತ್ಮಕ ಸುಧಾರಣೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಮಾಣು ಅತಿಕ್ರಮಣದ ಅಡಿಯಲ್ಲಿ ಸಾಂಪ್ರದಾಯಿಕ ಯುದ್ಧಗಳು ಅಥವಾ ಸೀಮಿತ ಘರ್ಷಣೆಗಳಿಗೆ ಸಾಂಸ್ಥಿಕ ರಚನೆ ಈಗಾಗಲೇ ಅಸ್ತಿತ್ವದಲ್ಲಿದೆ, ಆದರೆ ಇತರ ರೀತಿಯ ಕಾರ್ಯಾಚರಣೆಗಳಿಗೆ ಅಗತ್ಯವಾದ ಕ್ರಮಗಳನ್ನು ಹೊಂದಲು ಡಿಜಿಟೈಸ್ಡ್ ಬ್ಯಾಟಲ್‌ಸ್ಪೇಸ್‌ನಲ್ಲಿ ಜಂಟಿ ಯುದ್ಧಗಳನ್ನು ನಡೆಸಲು ಅವುಗಳನ್ನು ಮರು-ಮಾದರಿ, ಮರು-ಸಜ್ಜುಗೊಳಿಸಬೇಕು ಮತ್ತು ಮರು-ಆಧಾರಿತಗೊಳಿಸಬೇಕಾಗಿದೆ ಎಂದು ಹೇಳಿದರು.
ಭಾರತೀಯ ಮಿಲಿಟರಿ ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಜಗತ್ತಿನ ಬೇರೆ ಮಿಲಿಟರಿಗಳು ಎದುರಿಸದ ಸವಾಲುಗಳನ್ನು, ಕಾಠೀಣ್ಯತೆಯನ್ನು ಭಾರತ ಎದುರಿಸುತ್ತಿದೆ. ಆದ್ದರಿಂದ ಯುದ್ಧದ ಅಗತ್ಯಗಳನ್ನು ಪೂರೈಸಲು ಇತರ ದೇಶಗಳಲ್ಲಿ ಅಳವಡಿಸಿಕೊಂಡ ರೂಪಾಂತರ ಪರಿಕಲ್ಪನೆಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕಾಗುತ್ತದೆ ಎಂದರು.