ತಿರುವನಂತಪುರ: ಕೋವಿಡ್ ಸೋಂಕಿನ ಸಂದರ್ಭ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ದಾದಿಯರಿಗೆ ಕೋವಿಡ್ ಲಸಿಕೆಗಾಗಿ ಶುಲ್ಕ ಪಾವತಿಸಬೇಕಾದ ಸನ್ನಿವೇಶವನ್ನು ಭಾರತೀಯ ದಾದಿಯರ ಸಂಘ (ಐಎನ್‍ಎ) ವಿರೋಧಿಸಿದೆ.
ಐಎನ್‍ಎ ಕೇರಳ ಘಟಕದ ಅಧ್ಯಕ್ಷ ಲಿಬಿನ್ ಥಾಮಸ್, ಕರ್ತವ್ಯ ತತ್ಪರರಾದ ದಾದಿಯರು ಕೋವಿಡ್ ವ್ಯಾಪಕತೆಯ ಸಂದರ್ಭ ಮನೆಗೆ ತೆರಳಲದೆ, ಮಕ್ಕಳು, ಸಂಬಂಧಿಕರುಗಳಿಂದ ದೂರವಾಗಿ ಕರ್ತವ್ಯ ನಿಭಾಯಿಸಿದ್ದನ್ನು ಗಮನಿಸಿ ಆರೋಗ್ಯ ಸಚಿವರು ಮನಗಾಣಬೇಕು ಎಂದು ಹೇಳಿದರು.
ಲಿಜು ವೆಂಗಲ್, ಅಜೀಶ್ ಚಾಕೊ, ಅನ್ಸಾರಿ ಕೊನ್ನಿ, ದಿಲೀಪ್, ಪ್ರಿನ್ಸ್ ಮ್ಯಾಥ್ಯೂ ರಂಜಿತ್ ಸೊಕರಿಯಾ, ವಿಬಿನ್ ಜೇವಿಯರ್ ಮತ್ತು ಜೀನ್ಸ್ ಮೆಚೆರಿಲ್ ಮಾತನಾಡಿದರು.