ನವದೆಹಲಿ: ಈ ವರ್ಷ (2021) ದಲ್ಲಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಒಂದೇ ಬಾರಿ ನಡೆಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಪೊಖ್ರಿಯಾಲ್ ನಿಶಾಂಕ್, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ಈ ವರ್ಷದಲ್ಲಿ ಒಂದೇ ಬಾರಿ ನಡೆಯಲಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಯುಜಿ ನೀಟ್ (ಅಂಡರ್ ಗ್ರಾಜುಯೇಟ್) ಪರೀಕ್ಷೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗಿನ ಸಮಾಲೋಚನೆ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ನಡೆಸಲಿದೆ. ಈ ಸಂಬಂಧ ಪತ್ರವನ್ನು ಸ್ವೀಕರಿಸಿಲ್ಲ ಎಂದು ಎನ್ ಟಿಎ ಮಾಹಿತಿ ನೀಡಿರುವುದಾಗಿ ಪೊಖ್ರಿಯಾಲ್ ಹೇಳಿದ್ದಾರೆ.
ಪರೀಕ್ಷೆಯನ್ನು ಹಿಂದಿ, ಇಂಗ್ಲೀಷ್ ಜೊತೆಗೆ 11 ಭಾಷೆಗಳಲ್ಲಿ, ಪೆನ್-ಪೇಪರ್ ಮೂಲಕವೇ 2021 ರ ಆಗಸ್ಟ್ 1 ರಂದು (ಭಾನುವಾರ) ನಡೆಯಲಿದೆ ಎಂದು ಪೊಖ್ರಿಯಾಲ್ ತಿಳಿಸಿದ್ದಾರೆ.