ಕಾಸರಗೋಡು: ಇಂಧನ ಬೆಲೆಯೇರಿಕೆ ವಿರೋಧಿಸಿ ಸಂಯುಕ್ತ ಮುಷ್ಕರ ಸಮಿತಿ ಕರೆ ನೀಡಿರುವ ಹನ್ನೆರಡು ತಾಸುಗಳ ಕೇರಳ ರಾಜ್ಯವ್ಯಾಪಿ ಮುಷ್ಕರ ಇಂದು ಬೆಳಗ್ಗೆ 6ರಿಂದ ಸಾಯಂಕಾಲ 6ರ ವರೆಗೆ ನಡೆಯಲಿದೆ. ಮುಷ್ಕರದ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ಸೋಮವಾರ ಪ್ರತಿಭಟನಾ ಸಭೆ ನಡೆಯಿತು. ಇಂಧನ ಬೆಲೆಯೇರಿಕೆ ಹಾಗೂ ಕೇಂದ್ರ ಸರ್ಕಾರ ಮತ್ತು ತೈಲ ಕಂಪೆನಿಗಳ ಹಗಲುದರೋಡೆ ವಿರುದ್ಧ ಜಿಲ್ಲೆಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರತಿಭಟನಾ ಸಭೆ iÁಯೋಜಿಸಲಾಗಿತ್ತು. ಹರತಾಳದಲ್ಲಿ ಖಾಸಗಿ ವಾಹನ ಮಾಲಿಕರೂ ಸಹಕರಿಸುವಂತೆ ಜಿಲ್ಲಾ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ. ಸಿಐಟಿಯು, ಎಐಟಿಯುಸಿ, ಎಸ್‍ಟಿಯು, ಐಎನ್‍ಟಿಯುಸಿ ಸೇರಿದಂತೆ ಪ್ರಮುಖ ಕಾರ್ಮಿಕ ಸಂಘಟನೆಗಳು ಹರತಾಳದಲ್ಲಿ ಪಾಲ್ಗೊಳ್ಳುತ್ತಿದೆ.
ಬಿಎಂಎಸ್ ಹೊರತುಪಡಿಸಿ ಉಳಿದೆಲ್ಲಾ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದೆ. ಕೆಎಸ್ಸಾರ್ಟಿಸಿ ಯೂನಿಯನ್‍ಗಳು ಹಾಗೂ ಖಾಸಗಿ ಬಸ್ ಕಾರ್ಮಿಕರ ಸಂಘಟನೆ ಗಳೂ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದೆ.
ಕೇರಳದಲ್ಲಿ ವಾಹನ ಹರತಾಳ ಹಿನ್ನೆಲೆಯಲ್ಲಿ ಇಂದು ನಡೆಸಲುದ್ದೇಶಿಸಿದ್ದ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವ ವಿದ್ಯಾಲಯದ ಎಲ್ಲ ಪರೀಕ್ಷೆಗಳನ್ನೂ ಮುಂದೂಡಿದೆ. ಕಾಲಡಿ ಸಂಸ್ಕøತ ವಿಶ್ವ ವಿದ್ಯಾಲಯ ಮಾ. 2ರಂದು ನಡೆಸಲುದ್ದೇಶಿಸಿದ್ದ ಎಂ.ಎ ಮ್ಯೂಸಿಯೋಲಜಿ ಪ್ರವೇಶಾತಿ ಪರೀಕ್ಷೆ ಮುಂದೂಡಿದ್ದು, ಮುಂದಿನ ದಿನಾಂಕ ಪ್ರಕಟಿಸುವುದಾಗಿ ಪ್ರಕಟಣೆ ತಿಳಿಸಿದೆ.