ಮಂಜೇಶ್ವರ: ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಚುನಾವಣಾ ವೆಚ್ಚ ವೀಕ್ಷಕ ಸಂಜಯ್ ಪಾಲ್ ಮತ್ತು ಎಂ.ಎಸ್. ಸತೀಶ್ ಕುಮಾರ್ ಅವರು ತಲಪ್ಪಾಡಿ ಟೋಲ್ ಗೆ ಶನಿವಾರ ಭೇಟಿ ನೀಡಿದರು. ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ಮತ್ತು ಜಿಲ್ಲಾ ಪೋಲೀಸ್ ಮುಖ್ಯಸ್ಥ ಪಿ.ಬಿ.ರಾಜೀವ್ ಜೊತೆಗಿದ್ದರು. ತಲಪ್ಪಾಡಿ ಗಡಿಯ ಉಸ್ತುವಾರಿ ಸ್ಥಾಯಿ ಕಣ್ಗಾವಲು ತಂಡದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮಹೇಶ್ ಕುಮಾರ್ ಅವರೊಂದಿಗೆ ವೀಕ್ಷಕರು ಸಮಾಲೋಚನೆ ನಡೆಸಿದರು.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗದು ಮತ್ತು ಮದ್ಯದ ಕಳ್ಳಸಾಗಣೆ ಪರಿಶೀಲಿಸಲು ಜಿಲ್ಲೆಯ ಎಲ್ಲಾ 20 ಗಡಿ ಪ್ರದೇಶಗಳಲ್ಲಿ ಕಣ್ಗಾವಲು ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ನೇರವಾಗಿ ಪರಿಶೀಲನೆ ನಡೆಸುವರೆಂದು ಜಿಲ್ಲಾಧಿಕಾರಿ ಹೇಳಿದರು. ಸಾರ್ವಜನಿಕರು ಗರಿಷ್ಠವಾಗಿ ಸಹಕರಿಸಬೇಕು ಎಂದರು.
ಏಪ್ರಿಲ್ 6 ರವರೆಗೆ 24 ಗಂಟೆಗಳ ಕಣ್ಗಾವಲು ಮುಂದುವರಿಯಲಿದ್ದು, ಸ್ಥಳೀಯ ಕಣ್ಗಾವಲು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಬಿ.ಎಸ್.ಎಫ್, ಡಾಗ್, ಬಾಂಬ್ ಸ್ಕ್ವಾಡ್ ಮತ್ತು ಪೋಲೀಸರು ವಾಹನಗಳ ಮುಕ್ತ ತಪಾಸಣೆ ನಡೆಸಲಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಪಿ.ಬಿ.ರಾಜೀವ್ ತಿಳಿಸಿದ್ದಾರೆ.