HEALTH TIPS

ಗಡಿನಾಡಿನ ಪತ್ರಕರ್ತರ ಅಸ್ಮಿತೆಗೆ ಬೆಂಬಲ ನೀಡಲಾಗುವುದು-ಶಿವಾನಂದ ತಗಡೂರು- ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಘಟಕದ ಉದ್ಘಾಟನೆ-ಕನ್ನಡ ಪತ್ರಕರ್ತರ ಸಮಾವೇಶ ಅಧ್ಯಕ್ಷತೆ ವಹಿಸಿ ಅಭಿಮತ

                  

       ಕಾಸರಗೋಡು: ಜಾಗತಿಕವಾಗಿ ಭೀತಿ ಸೃಷ್ಟಿಸಿರುವ ಕೋವಿಡ್ ಮಹಾಮಾರಿ ತಂದೊಡ್ಡಿರುವ ವ್ಯಾಪಕ ಸವಾಲುಗಳ ಮಧ್ಯೆ ಕೋವಿಡ್ ಮುನ್ನೆಲೆಯ ಕಾರ್ಯಚಟುವಟಿಕೆಗಳಲ್ಲಿ ಶ್ಲಾಘನೀಯರಾಗಿ ಕಾರ್ಯನಿರ್ವಹಿಸಿದ ವರ್ಗದಲ್ಲಿ ಮಾಧ್ಯಮಗಳ ಪಾತ್ರವೂ ಹಿರಿದು. ಜೊತೆಗೆ ಅತೀ ಹೆಚ್ಚು ತೊಂದರೆಗೊಳಗಾದವರೂ ಪತ್ರಕರ್ತರೇ ಆಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಪ್ರಧಾನ ಅಂಗವಾದ ಮಾಧ್ಯಮ ಕ್ಷೇತ್ರವನ್ನು ಮತ್ತೆ ಕಟ್ಟಿನಿಲ್ಲಿಸುವಲ್ಲಿ ಪತ್ರಕರ್ತರು ಸಂಘಟನಾತ್ಮಕವಾಗಿ ಸೆಟೆದುನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು  ಏಷ್ಯಾ ಪತ್ರಕರ್ತರ ಒಕ್ಕೂಟ ಸಮಚಾಲಕ ಮದನ ಗೌಡ ತಿಳಿಸಿದರು. 


         ಅವರು ಭಾನುವಾರ ಕಾಸರಗೋಡು ನುಳ್ಳಿಪ್ಪಾಡಿಯ ಹೈವೇ ಕ್ಯಾಸೆಲ್ ಸಭಾಂಗಣದಲ್ಲಿ ಕೆಯುಡಬ್ಲ್ಯೂಜೆ ಕಾಸರಗೋಡು ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಕನ್ನಡ ಪತ್ರಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

      ಗಡಿನಾಡ ಕನ್ನಡಿಗರ ಮಾತೃಭಾಷಾ ಪ್ರೇಮ ಇಲ್ಲಿನ ಕನ್ನಡಪರ ಚಟುವಟಿಕೆಗಳಿಗೆ ಪ್ರೇರಣೆ ಒದಗಿಸಿದೆ. ವೃತ್ತಿಪರ ಮೌಲ್ಯ ಕಾಪಾಡಿಕೊಂಡು ವಿಶ್ವಾಸಾರ್ಹತೆಯೊಂದಿಗೆ ಕಾರ್ಯನಿರ್ವಹಿಸಲು ಪತ್ರಕರ್ತರು ಬದ್ಧರಾಗಬೇಕು ಎಂದು ತಿಳಿಸಿದರು. 

         ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ದ ಅಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ, ಹಿರಿಯ ಪತ್ರಕರ್ತರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಅವರ ಆದರ್ಶ ಪಾಲಿಸುವ ಮೂಲಕ ಸಂಘಟನೆಯನ್ನು ಕ್ರಿಯಾತ್ಮಕವಾಗಿ ಮುನ್ನಡೆಸಿಕೊಂಡು ಹೋಗಲು ಸಂಘಟನೆ ಸದಸ್ಯರು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು. ಕನ್ನಡ ಭಾಷೆ ಸಂಸ್ಕøತಿಯನ್ನು ಬೆಳೆಸುವ ಜೊತೆಗೆ ಸದೃಢ ಸಮಾಜ ನಿರ್ಮಾಣದಲ್ಲಿ ಬಹುದೊಡ್ಡ ಕಾಣ್ಕೆ ನೀಡುತ್ತಿರುವ ಮಾಧ್ಯಮ ವಲಯದಲ್ಲಿ ಕರ್ನಾಟಕದ ಹೊರ ಭಾಗದಲ್ಲಿರುವ ಕನ್ನಡಿಗ ಪತ್ರಕರ್ತರ ಶ್ರಮಗಳು ಅತ್ಯಪೂರ್ವವಾದುದು. ಮಿತಿಗೊಳಪಟ್ಟ ಅವಕಾಶಗಳ ಮಧ್ಯೆ, ತಮ್ಮ ಅಸ್ತಿತ್ವದೊಂದಿಗೆ ಹೋರಾಡುತ್ತಾ ನಿರ್ವಹಿಸುತ್ತಿರುವ ಸಮರೋಪಾದಿಯ ಕರ್ತವ್ಯ ನಿಷ್ಠೆ ಮಾದರಿಯಾದುದು. ಈ ನಿಟ್ಟಿನಲ್ಲಿ ಗಡಿನಾಡಿನ ಕನ್ನಡ ಪತ್ರಕರ್ತರ ನ್ಯಾಯಯುತ ಬೇಡಿಕೆಗಳಿಗೆ ಮನ್ನಣೆ ನೀಡಿ ವಿಶೇಷ ನೆರವುಗಳಿಗೆ ಪ್ರಯತ್ನಿಸಲಾಗುವುದೆಂದು ಅವರು ಭರವಸೆ ನೀಡಿದರು.


             ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ದನ್ ಅಬ್ದುಲ್ ರಹಮಾನ್, ಸಂಘಟನೆ ದ,ಕ ಜಿಲ್ಲಾ ಘಟಕ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಮಹಾರಾಷ್ಟ್ರ ಘಟಕ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕನ್ನಡ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಅಚ್ಯುತ ಚೇವಾರ್, ಕೆಯುಡಬ್ಲ್ಯೂಜೆ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ  ಉಪಸ್ಥಿತರಿದ್ದರು.

        ಈ ಸಂದರ್ಭ ಹಿರಿಯ ಪತ್ರಕರ್ತರಾದ ಮಲಾರ್ ಜಯರಾಮ ರೈ, ಟಿ.ಶಂಕರನಾರಾಯಣ ಭಟ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕಿದೂರು ಶಂಕರನಾರಾಯಣ ಭಟ್, ಕೆ. ಭಾಸ್ಕರ, ಬಿ.ಪಿ ಶೇಣಿ ಹಾಗೂ ದೇವದಾಸ್ ಪಾರೆಕಟ್ಟ ಅವರನ್ನು ಗೌರವಿಸಲಾಯಿತು. ಜಿಲ್ಲೆಯ ಪತ್ರಕರ್ತರಿಗಿರುವ ಆರೋಗ್ಯಕಾರ್ಡನ್ನು ಶಿವಾನಂದ ತಗಡೂರು ಔಪಚಾರಿಕವಾಗಿ ಉದ್ಘಾಟಿಸಿದರು.ಜಾನಪದ ಕಲಾವಿದೆ ಪುಷ್ಪಾವತಿ ನೆಟ್ಟಣಿಗೆ, ಛದ್ಮವೇಷ ಕಲಾವಿದ ಮಮ್ಮುಞÂ ಪೈವಳಿಕೆ ಹಾಗೂ ಯೋಗಪಟು ಅಭಿಜ್ಞಾ ಅವರನ್ನು ಸನ್ಮಾನಿಸಲಾಯಿತು. ರವಿ ನಾಯ್ಕಾಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಯಿಭದ್ರಾ ರೈ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಮತ್ತು ಬಳಗದವರಿಂದ ಸುಗಮಸಂಗೀತ ಕಾರ್ಯಕ್ರಮ ಜರಗಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries