ಬೆಂಗಳೂರು: ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ತಾಣಗಳು ಶುಕ್ರಾವರ ರಾತ್ರಿ ಸುಮಾರು 30 ನಿಮಿಷಗಳ ಕಾಲ ಸ್ಥಗಿತಗೊಂಡಿದ್ದವು. ಭಾರತ ಸೇರಿದಂತೆ ಪ್ರಪಂಚದ ಹಲವು ಕಡೆ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
"ಬಹಳ ಸಮಯದಿಂದ ಯಾವುದೇ ಸಂದೇಶಗಳು ಹೋಗುತ್ತಿಲ್ಲ" ಎಂದು ಜನಪ್ರಿಯ ಮೆಸೆಂಜರ್ ವಾಟ್ಸಾಪ್ ನ ಕೆಲವು ಬಳಕೆದಾರರು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲೂ ಇದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಫೋಟೋ ಮತ್ತು ವಿಡಿಯೋ ಲೋಡ್ ಆಗುತ್ತಿಲ್ಲ ಕೆಲವು ಬಳಕೆದಾರರು ದೂರಿದ್ದಾರೆ.
ಈ ಸಮಸ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಮತ್ತು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಯಾವುದೇ ಅಧಿಕೃತ ಪ್ರಕಟಣೆ ಸಹ ನೀಡಿಲ್ಲ.