ಕಾಸರಗೋಡು: ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾಮಟ್ಟದಲ್ಲಿ ಚಟುವಟಿಕೆ ನಡೆಸುತ್ತಿರುವ ವಿಧವಾ ಸೆಲ್ ನೇತೃತ್ವದಲ್ಲಿ ವಿಧವೆಯರ ಪುರೋಗಿತಿ ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಜಾರಿಗೆ ತಂದಿರುವ'ಕೂಟ್'ಯೋಜನೆಯ ಸಮಾವೇಶ ಕಾಞಂಗಾಡಿನ ರಾಜ್ ರೆಸಿಡೆನ್ಸಿಯಲ್ಲಿ ಜರಗಿತು.
ಈ ಸಂದರ್ಭ ಪುನರ್‍ವಿವಾಹಕ್ಕೆ ತಯಾರಾಗಿರುವ 30ಮಂದಿ ವಿಧವೆಯರು ಹಾಗೂ 15ಮಂದಿ ಪುರುಷರು ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿಧವೆಯರ ಸಂರಕ್ಷಣೆಗಾಗಿ ಕಾಸರಗೋಡು ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಡಿ. ಸಜಿತ್‍ಬಾಬು ಅವರ ನಿರ್ದೇಶಾನುಸಾರ ಮಹಿಳಾ ಸಂರಕ್ಷಣಾಧಿಕಾರಿಯ ಸಹಕಾರದೊಂದಿಗೆ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಮೊದಲ ಹಂತದಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಪುನರ್‍ವಿವಾಹಕ್ಕೆ ಆಸಕ್ತಿಯುಳ್ಳವರ ಮಾಹಿತಿ ಸಂಗ್ರಹಿಸಿ ನೋಂದಾವಣೆ ನಡೆಸಲಾಗಿದೆ. ಜತೆಗೆ ವಿಧವಾ ವಿವಾಹಕ್ಕೆ ಆಸಕ್ತಿ ಪ್ರಕಟಿಸಿರುವ ಪುರುಷರ ಹೆಸರನ್ನೂ ನೋಂದಾಯಿಸಿಕೊಂಡು ಅವರ ಹಿನ್ನೆಲೆ ಹಾಗೂ ಸಮಗ್ರ ದಾಖಲೆ ತಪಾಸಣೆ ನಡೆಸಿದ ನಂತರ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸಲಾಗಿದೆ. ಜಿಲ್ಲಾ ಮಹಿಳಾ ಸಂರಕ್ಷಣಾಧಿಕಾರಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನಬೀಡಿದರು. ಜಿಲ್ಲಾಧಿಕಾರಿ ಡಾ. ಡಇ.ಸಜಿತ್ ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಶನ್ ಕಾರ್ಯಕ್ರಮ ಪ್ರಬಂಧಕಿ ಆರತಿ ಉಪಸ್ಥಿತರಿದ್ದರು.