ತಿರುವನಂತಪುರ: ಚುನಾವಣಾ ಪ್ರಚಾರದ ವೇಳೆ ಎನ್.ತಿi.ಎ ಅಭ್ಯರ್ಥಿ ಶೋಭಾ ಸುರೇಂದ್ರನ್ ಮೇಲೆ ಸಿಪಿಎಂ ಣಒತಿ ಹಲ್ಲೆ ನಡೆಸಿದ ಘಟನೆ ನಿನ್ನೆ ನಡೆದಿದೆ.
ಸಿಪಿಎಂ ಪಕ್ಷದ ಕಾರ್ಯಕರ್ತರ ವಿಕೋಪಿತ ತಂಡವೊಂದು ಚೆಂಪಾಳಂತಿ ಅನಿಯೂರ್ನಲ್ಲಿ ಶೋಭಾ ಸುರೇಂದ್ರನ್ ವಿರುದ್ಧ ಹಿಂಸಾಚಾರಕ್ಕಿಳಿದರು. ಘಟನೆಯಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಹಿಂಸಾಚಾರ ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದ್ದು ಬಳಿಕವಷ್ಟೇ ಪೋಲೀಸರು ಆಗಮಿಸಿದರು. ಆದರೆ ಪೋಲೀಸರು ಸಿಪಿಎಂ ಕಾರ್ಯಕರ್ತರನ್ನು ಬಂಧಿಸಲು ನಿರಾಕರಿಸಿದರು ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ ಶೋಭಾ ಸುರೇಂದ್ರನ್ ಮತ್ತು ಕ್ಷೇತ್ರದ ಅಧ್ಯಕ್ಷ ಆರ್.ಎಸ್.ರಾಜೀವ್ ನೇತೃತ್ವದ ಬಿಜೆಪಿ ಕಾರ್ಯಕರ್ತರು ಸಿಪಿಎಂ ಬೂತ್ ಸಮಿತಿಯ ಮುಂದೆ ಧರಣಿ ಪ್ರತಿಭಟನೆ ನಡೆಸಿದರು.