ಕಣ್ಣೂರು: ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವು ಅಂಶಗಳಿವೆ. ಇಲ್ಲಿ ಗೆಲುವಿನ ಸಾಧ್ಯತೆಯನ್ನು ಪರಿಗಣಿಸಿ ಮಹಿಳೆಯರನ್ನು ಹೊರಗಿಡಲಾಗುತ್ತಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜ ಹೇಳಿರುವರು. ಎಲ್.ಡಿ.ಎಫ್.ನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದು ಸಚಿವೆ ಹೇಳಿದರು.
ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಅನೇಕ ಮಹಿಳೆಯರು ಇದ್ದಾರೆ. ಆದರೆ ಅವಕಾಶ ವಂಚಿತಗೊಂಡಿದ್ದರಿಂದ ಲತಿಕಾ ಸುಭಾಷ್ ಕೇಶಮುಂಡನದ ಪ್ರತಿಭಟನೆ ನಡೆಸಬೇಕಾಯಿತು. ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಸ್ಥಾನ-ಮಾನಗಳನ್ನು ನೀಡಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಬ್ಬ ಮಹಿಳೆಯನ್ನೂ ಗೆಲ್ಲಿಸಲು ಸಾಧ್ಯವಾಗಿಲ್ಲ. ಉಪಚುನಾವಣೆಯ ಮೂಲಕ ಶಾನಿಮೋಳ್ ಉಸ್ಮಾನ್ ಅವರು ವಿಧಾನಸಭೆಗೆ ಆಯ್ಕೆಯಾಗಬೇಕಾಯಿತೆಂದು ಶೈಲಜಾ ಬೊಟ್ಟುಮಾಡಿದರು.
ಮಟ್ಟನ್ನೂರ್ ಕ್ಷೇತ್ರ ಸಿಪಿಐ (ಎಂ) ನ ಭದ್ರಕೋಟೆಯಾಗಿದ್ದು, ಗೆಲುವು ಖಚಿತ ಎಂದು ಶೈಲಜ ಹೇಳಿದರು.