ತಿರುವನಂತಪುರ: ವಿಧಾನಸಭಾ ಚುನಾವಣೆಗೆ ವಿಶೇಷ ವೀಕ್ಷಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಚುನಾವಣಾ ಆಯೋಗವು ರಾಜ್ಯದಲ್ಲಿ ಮೂರು ವಿಶೇಷ ವೀಕ್ಷಕರನ್ನು ನೇಮಿಸಿದೆ.
ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಜಿಲ್ಲಾ ಮತ್ತು ಕ್ಷೇತ್ರ ಮಟ್ಟದಲ್ಲಿ ನೇಮಕಗೊಂಡವರಿಗೆ ಹೆಚ್ಚುವರಿಯಾಗಿ ರಾಜ್ಯ ಮಟ್ಟದಲ್ಲಿ ಇನ್ನೂ ಮೂರು ವೀಕ್ಷಕರನ್ನು ನೇಮಿಸಿದೆ. ಕೇರಳದಲ್ಲಿ ಚುನಾವಣಾ ವ್ಯವಸ್ಥೆಯನ್ನು ವಿಶೇಷ ಪೋಲೀಸ್ ವೀಕ್ಷಕ, ಸಾಮಾನ್ಯ ವೀಕ್ಷಕ ಮತ್ತು ಖರ್ಚು ವೀಕ್ಷಕರಿಂದ ಮೌಲ್ಯಮಾಪನ ಮಾಡಲಾಗುತ್ತದೆ.
ಮಾಜಿ ಐಎಎಸ್ ಅಧಿಕಾರಿ ಜೆ. ರಾಮಕೃಷ್ಣ ರಾವ್ ವಿಶೇಷ ಸಾರ್ವಜನಿಕ ವೀಕ್ಷಕ. ಮಾಜಿ ಐಪಿಎಸ್ ಅಧಿಕಾರಿ ದೀಪಕ್ ಮಿಶ್ರಾ ವಿಶೇಷ ಪೋಲೀಸ್ ಇನ್ಸ್‍ಪೆಕ್ಟರ್ ಮತ್ತು ಮಾಜಿ ಐಆರ್.ಎಸ್ ಅಧಿಕಾರಿ ಪುಷ್ಪಿಂದರ್ ಸಿಂಗ್ ಪೂನಿಯಾ ವಿಶೇಷ ಖರ್ಚು ವೀಕ್ಷಕರಾಗಿದ್ದಾರೆ.
ವಿಶೇಷ ಪೋಲೀಸ್ ಇನ್ಸ್‍ಪೆಕ್ಟರ್ ಮತ್ತು ವಿಶೇಷ ಖರ್ಚು ವೀಕ್ಷಕರು ಶುಕ್ರವಾರ ರಾಜ್ಯಕ್ಕೆ ಆಗಮಿಸಿದರು. ಇವರಿಬ್ಬರು ಮುಖ್ಯ ಚುನಾವಣಾ ಅಧಿಕಾರಿ, ಮುಖ್ಯ ಕಾರ್ಯದರ್ಶಿ, ರಾಜ್ಯ ಪೆÇಲೀಸ್ ಮುಖ್ಯಸ್ಥರು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಪರಿಸ್ಥಿತಿಯನ್ನು ನಿರ್ಣಯಿಸಲು ವೀಕ್ಷಕರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ. ಮೊದಲ ಹಂತದಲ್ಲಿ ಅವರು ಉತ್ತರ ಜಿಲ್ಲೆಗಳಾದ ಕಾಸರಗೋಡು, ಕಣ್ಣೂರು, ಕೋಝಿಕೋಡ್ ಮತ್ತು ಮಲಪ್ಪುರಂಗೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 6 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ.