ತಿರುವನಂತಪುರ: ಕಾಂಗ್ರೆಸ್ಸ್ ಮುಖಂಡ ಕೆ.ಮುರಳೀಧರನ್ ನೇಮಂ ನಲ್ಲಿ ಸ್ಪರ್ಧಿಸುತ್ತಿರುವುದು ಆತ್ಮಹತ್ಯೆಗೆ ಸಮವಾದುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಕುಟುಕಿದರು. ಮುರಳೀಧರನ್ ಪಿಣರಾಯಿ ವಿಜಯನ್ ಪರ ಸ್ಪರ್ಧಿಸುತ್ತಿದ್ದಾರೆ. ಮುರಳೀಧರನ್ ಈಗಾಗಲೇ ಸಿಪಿಎಂ ಜೊತೆ ಒಪ್ಪಂದ ಮಾಡಿಕೊಂಡಿರುವರು ಮತ್ತು ಈ ಬಾರಿ ಅವರು ಯುಡಿಎಫ್ ಅಭ್ಯರ್ಥಿಯ ಮತಗಳನ್ನು ಸಹ ಕಳೆದಕೊಳ್ಳುವರೆಂದು ಕೆ ಸುರೇಂದ್ರನ್ ತಿಳಿಸಿರುವರು.
ಕೊನ್ನಿಯಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ ಅಭ್ಯರ್ಥಿಗಳ ವಿರುದ್ಧ ಆಯಾ ಪಕ್ಷದೊಳಗೆ ಪ್ರತಿಭಟನೆ ನಡೆಯುತ್ತಿದೆ. ಕೊನ್ನಿಯಲ್ಲಿ ಬಿಜೆಪಿ ಬಲವಾದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಮತ್ತು ಜನರಲ್ಲಿ ಅದರಿಂದ ಮುಕ್ತ ಬೆಂಬಲ ವ್ಯಕ್ತಗೊಂಡಿದೆ ಎಂದು ಅವರು ಹೇಳಿದರು.
ಕೆ. ಮುರಳೀಧರನ್ ಅವರು ನೇಮಂ ನಲ್ಲಿ ಗೆಲ್ಲುವ ಉದ್ದೇಶ ಹೊಂದಿರಲಿಲ್ಲ. ಬಿಜೆಪಿಯನ್ನು ಸೋಲಿಸಲು ಸಿಪಿಎಂಗೆ ಸಹಾಯ ಮಾಡುವುದು ಅವರ ಉದ್ದೇಶ ಎಂದು ತಿಳಿಸಿದರು. ಮುರಲೀಧರನ್ ಬಹಳ ಸಮಯದಿಂದ ಸಿಪಿಎಂ ಶಿಬಿರದಲ್ಲಿದ್ದಾರೆ. ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.