ತಿರುವನಂತಪುರ:ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಮರ್ಥವಾಗಿ ಎದುರಿಸಲು ಬಿಜೆಪಿ ಘೋಷಣೆ ಬಿಡುಗಡೆಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ಸಂಜೆ 'ಹೊಸ ಕೇರಳ ವಿತ್ ಮೋದಿ' ಎಂಬ ಘೋಷಣೆಯನ್ನು ಅನಾವರಣಗೊಳಿಸಿದರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದ ವಿಜಯಯಾತ್ರೆ ಮುಕ್ತಾಯದ ಅಧಿವೇಶನದಲ್ಲಿ ಈ ಘೋಷಣೆಯನ್ನು ಅನಾವರಣಗೊಳಿಸಲಾಯಿತು.
ಸಮಾರಂಭದಲ್ಲಿ ಚಲನಚಿತ್ರ ತಾರೆ ದೇವನ್ ಅವರ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಂಡಿತು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ವಿ ಮುರಲೀಧರನ್, ಮಿಜೋರಾಂ ಮಾಜಿ ಗವರ್ನರ್ ಕುಮ್ಮನಂ ರಾಜಶೇಖರನ್, ಮೆಟ್ರೊಮ್ಯಾನ್ ಇ ಶ್ರೀಧರನ್, ರಾಜ್ಯದ ಹಿರಿಯ ಬಿಜೆಪಿ ಮುಖಂಡರು ಮತ್ತು ಎನ್‍ಡಿಎ ಮುಖಂಡರು ಉಪಸ್ಥಿತರಿದ್ದರು.