ವ್ಯಕ್ತಿಯ ವ್ಯಕ್ತಿತ್ವ ಬೆಳೆಯುವಲ್ಲಿ ಅವರಲ್ಲಿರುವ ಪ್ರತಿಭೆ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೊಳಗಿನ ಪ್ರತಿಭೆಯ ಅನಾವರಣ ಅತಿ ಸೂಕ್ಷö್ಮ ತಂತ್ರಗಾರಿಕೆಯಾಗಿದ್ದು, ಕೆಲವೇ ಸಾಧಕರಿಗಷ್ಟೇ ಇದು ಸಾಧ್ಯ. ಇಂತಹ ಸಾಧನಾಶೀಲತೆ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ವಿಭಿನ್ನವಾಗಿ ಗಮನಸೆಳೆಯುತ್ತದೆ.
ಮೂಲತಃ ಮುಂಡಿತ್ತಡ್ಕ ನಿವಾಸಿಯಾಗಿದ್ದು,ಪ್ರಸ್ತುತ ಬಂದ್ಯೋಡು ಸಮೀಪ ಪಚ್ಚಂಬಳದಲ್ಲಿ ವಾಸಿಸುತ್ತಿರುವ ಮಮ್ಮಂಞ ಎಂಬವರು ವಿಶಿಷ್ಟ ಪ್ರತಿಭೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೊಲ್ಲಿ ರಾಷ್ಟçದಲ್ಲಿ ಉದ್ಯೋಗಿಯಾಗಿರುವ ಇವರು ಖ್ಯಾತನಾಮರ ವೇಶಧರಿಸುವ ಮೂಲಕ(ಛದ್ಮವೇಶ) ಅತ್ಯಪೂರ್ವ ಪ್ರತಿಭೆ ಹೊಂದಿರುವವರಾಗಿದ್ದಾರೆ. ಇವರ ಮುಖದ ಒಟ್ಟು ಸ್ವರೂಪತೆ ಎಂತವರ ವೇಶ ಧರಿಸಲೂ ಒಪ್ಪುವಂತಿರುವುದು ವರದಾನವಾಗಿದ್ದು ಅಂತರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.
ಇಂತಹ ಪ್ರತಿಭಾಶಾಲಿಯನ್ನು ಸಮರಸ ಸುದ್ದಿ ವೀಕ್ಷಕರಿಗಾಗಿ ಪರಿಚಯಿಸುತ್ತಿದ್ದು, ಆಯ್ದ ಭಾಗಗಳ ಅವತರಣಿಕೆ ಇಲ್ಲಿದೆ. ವೀಕ್ಷಿಸಿ, ಹಂಚಿ, ಪ್ರೋತ್ಸಾಹಿಸಿ.