ತಿರುವನಂತಪುರ: ಜಾರಿ ನಿರ್ದೇಶನಾಲಯ(ಇಡಿ)ದ ಬೆನ್ನಿಗೇ ಇದೀಗ ಆದಾಯ ತೆರಿಗೆ ಇಲಾಖೆಯು ಕಿಫ್ಬಿಯ ಬಗ್ಗೆಯೂ ತನಿಖೆ ನಡೆಸುತ್ತಿದೆ. ಕಿಫ್ಬಿ ಯೋಜನೆಯ ವಿವರಗಳನ್ನು ಕೋರಿ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿದೆ. ಕಳೆದ ಐದು ವರ್ಷಗಳಲ್ಲಿ ಕಿಪ್ಬಿಯು ಜಾರಿಗೊಳಿಸಿದ ಯೋಜನೆಗಳ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಿದೆ. ಈ ಹಿಂದೆ ಇಡಿ ಕೂಡ ಈ ನಿಟ್ಟಿನಲ್ಲಿ ನೋಟಿಸ್ ಕಳುಹಿಸಿತ್ತು.
ಇಡಿಯ ತನಿಖೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿರುವುದರಿಂದ ಮತ್ತೊಂದು ಕೇಂದ್ರ ಸಂಸ್ಥೆ ಈ ವಿಷಯದಲ್ಲಿ ಮಧ್ಯಪ್ರವೇಶಿಸುತ್ತಿದೆ. ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ವಿದೇಶಿ ಹೂಡಿಕೆಯನ್ನು ಸ್ವೀಕರಿಸಿದ ಆರೋಪ ಹೊತ್ತಿರುವ ಕಿಬ್ಬಿಯ ಹಣಕಾಸಿನ ವ್ಯವಹಾರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.