ಮಂಜೇಶ್ವರ: ಮಂಜೇಶ್ವರದ ಬಿಎಸ್ಪಿ ಅಭ್ಯರ್ಥಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಅಭ್ಯರ್ಥಿ ಕೆ.ಸುಂದರ ಪೋನ್‍ಕರೆಗೂ ಲಭ್ಯವಿಲ್ಲ ಎಂದು ಜಿಲ್ಲಾಧ್ಯಕ್ಷ ವಿಜಯ್ ಹೇಳಿರುವರು.
ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಸುಂದರ ಅವರನ್ನು ಒತ್ತಾಯಿಸಿರುವುದಾಗಿ ಹೇಳಲಾಗಿದೆ. ಇದೇ ಸನ್ನಿವೇಶದಲ್ಲಿ ಸುಂದರ ಸಿಲುಕಿದಂತೆ ಕಾಣಿಸುತ್ತಿದೆ ಎನ್ನಲಾಗಿದು, ಶನಿವಾರ ರಾತ್ರಿಯಿಂದಲೂ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಸುಂದರ ಮತ್ತು ಅವರ ಕುಟುಂಬ ಬಿಜೆಪಿಗೆ ಸೇರಿದರು ಎಂದು ಬಿಜೆಪಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 89 ಮತಗಳ ಅಂತರದಿಂದ ಪರಾಭವಗೊಂಡಿತ್ತು. ಆ ಸಂದರ್ಭ ಸುಂದರ ಅವರು ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರಿಗೆ ಲಭ್ಯವಾದ ಮತಗಳಿಂದ ಮತ ಹಂಚಿಕೆಯಾಗಿ ಸುರೇಂದ್ರನ್ ಪರಾಭವಗೊಳ್ಳಲು ಕಾರಣವಾಯಿತೆಂದು ವಿಶ್ಲೇಶಿಸಲಾಗಿತ್ತು.