ತಿರುವನಂತಪುರ: ಸ್ಥಾನ ನೀಡಿಲ್ಲವೆಂಬ ಬೇಗುದಿಯಿಂದ ಕೇಶಮುಂಡನಗೈದು ಪ್ರತಿಭಟಿಸಿದ ಲತಿಕಾ ಸುಭಾಷ್ ಅವರ ಕ್ರಮದ ವಿರುದ್ದ ಕಾಂಗ್ರೆಸ್ಸ್ ನೇತಾರೆ ಲಾಲಿ ವಿನ್ಸೆಂಟ್ ಟೀಕಿಸಿರುವರು. ಕತ್ತರಿಸಿದ ಕೂದಲು ಮತ್ತೆ ಬೆಳೆಯುತ್ತದೆ, ಆದರೆ ಪಕ್ಷಕ್ಕಾದ ಅವಮಾನದ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ? ಎಂದು ಲಾಲಿ ಲಿವಿನ್ಸೆಂಟ್ ಕೇಳಿರುವರು.
ಲತಿಕಾ ಅವರ ಪ್ರತಿಭಟನಾ ಕ್ರಮವು ಶತ್ರು ಪಕ್ಷಗಳಿಗೆ ಆಯುಧವಾಗಿದೆ. ಅವರ ಹೇಯಕರ ಪ್ರತಿಭಟನೆಯಿಂದ ಕಾಂಗ್ರೆಸ್ಸ್ ಪಕ್ಷಕ್ಕೆ ಚುನಾವಣೆಯ ಈ ಸಂದರ್ಭ ಒತ್ತಡಕ್ಕೆ ಕಾರಣವಾಯಿತು. ಲತಿಕಾ ಮತ್ತು ಅವರ ಪತಿಯನ್ನು ಕಾಂಗ್ರೆಸ್ ಈವರೆಗೆ ಸಾಕಷ್ಟು ಸಲಹಿದೆ ಎಂದು ಲಾಲಿ ವಿನ್ಸೆಂಟ್ ವಾಗ್ದಾಳಿ ನಡೆಸಿರುವರು.