ಕಾಸರಗೋಡು: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಕೇರಳ ಸರ್ಕಾರ ಅಂಗೀಕರಿಸುವಂತೆ ಆಗ್ರಹಿಸಿ ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘ್(ಬಿಎಂಎಸ್)ಕಾಸರಗೋಡು ವಲಯ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಯಿತು.
ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಕೇಶವ ಧರಣಿ ಉದ್ಘಾಟಿಸಿದರು. ಆಟೋರಿಕ್ಷಾ ಮಜ್ದೂರ್ ಸಂಘ್ ಜಿಲ್ಲಾ ಸಮಿತಿ ಸಮಿತಿ ಅಧ್ಯಕ್ಷ ಎಸ್.ಕೆ ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಪಿ.ದಿನೇಶ್, ರಿಜೀಶ್, ಉಪೇಂದ್ರ ಕೋಟಕಣಿ, ಶಿವಪ್ರಸಾದ್, ಬಾಬುಮೋನ್ ಮುಂತಾದವರು ನೇತೃತ್ವ ನೀಡಿದರು. ಕುಞÂಕೃಷ್ಣನ್ ಸ್ವಾಗತಿಸಿದರು.