ಕಾಸರಗೋಡು:ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಎಐಐಎಂಎಸ್)ಕಾಸರಗೋಡು ಜಿಲ್ಲೆಗೆ ಮಂಜೂರುಮಾಡಿಕೊಡುವಂತೆ ಒತ್ತಾಯಿಸಿ ಜನಕೀಯ ಒಕ್ಕೂಟ ವತಿಯಿಂದ ಮಂಗಳವಾರ ಕಾಸರಗೋಡಿನಲ್ಲಿ ಮಹಿಳೆಯರ ಸಾಮೂಹಿಕ ಸ್ಕೂಟರ್ ಜಾಥಾ ನಡೆಯಿತು.
ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಹಿಳಾ ವಿಂಗ್‍ನ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷೆ ಶೆರ್ಲಿ ಸೆಬಾಸ್ಟಿಯನ್ ಉದ್ಘಾಟಿಸಿದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ ಜಮೀಲಾ ಅಹಮ್ಮದ್ ಅವರು ಏಮ್ಸ್ ಹೋರಾಟಸಮಿತಿ ಜಿಲ್ಲಾ ಕನ್ವೀನರ್ ಫರೀನಾ ಕೋಟ್ಟಪ್ಪುರ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಸಿಸ್ಟರ್ ಜಯಾಆಂಟೋ ಮಂಗಲತ್, ಮುನಿಸಾ ಅಂಬಲತ್ತರ, ಸುಮಿತಾ ನೀಲೇಶ್ವರ ಉಪಸ್ಥಿತರಿದ್ದರು.
ಎಂ.ಪಿ ಜಮೀಲಾ, ಡೈಸಿ ಜೋಯ್, ಅಶ್ವಿನಿ ಎಂ.ಪಿ. ಸರಿಜಾಬಾಬು, ಆಯಿಷಾ ಮೇಲ್ಪರಂಬ, ಪಿ.ಜ್ಯೋತಿ. ವಿ.ಪಿ ಸ್ನೇಹ, ಕೆ.ಶಾಲಿನಿ, ಸೀಮಾ ಮುರಳಿ, ಪಿ.ಪಿ ನಸೀಮಾ, ಎಂ.ವಿ ರಮ್ಲಾ, ಗೀತಾ ಕಾಸರಗೋಡು, ರತಿದೇವಿ, ಜೋಯ್ಸಿ ಜಾನ್, ಅಮಿತಾ ಸೇತು, ಸಿಂಧು ಕೊಳವಯಲ್, ಚಂದ್ರಮಣಿಗಂಗಾಧರನ್, ನಿಶಾ ಕೊಳವಯಲ್ ನೇತೃತ್ವ ನೀಡಿದರು.