ತ್ರಿಶೂರ್: ರಾಜ್ಯಸಭಾ ಸಂಸದ ಸುರೇಶ್ ಗೋಪಿ ವಿಧಾನಸಭೆಗೆ ಸ್ಪರ್ಧಾ ಕಣಕ್ಕಿಳಿಸಲು ಬಿಜೆಪಿ ಕೇಂದ್ರ ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಸುರೇಶ್ ಗೋಪಿ ಯಾವುದೇ ಅನುಕೂಲಕರ ನಿಲುವನ್ನು ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಬಲವಂತಪಡಿಸಿದರೆ ಗುರುವಾಯೂರ್ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತಿಸಲಾಗುವುದೆಂದು ಸುರೇಶ್ ಗೋಪಿ ನೇತಾರರಿಗೆ ತಿಳಿಸಿರುವರೆಂದು ಬಲ್ಲಮೂಲಗಳಿಂದ ತಿಳಿಯಲಾಗಿದೆ. ಕೇಂದ್ರ ನಾಯಕತ್ವವು ಎ + ಕ್ಷೇತ್ರವನ್ನು ಸುರೇಶ್ ಗೋಪಿಗೆ ನೀಡಲು ಬಯಸಿದೆ ಎಂದು ತಿಳಿಯಲಾಗಿದೆ.