HEALTH TIPS

ಕಂದನ ಕಾಪಾಡಿ ಪ್ರಾಣ ಬಿಟ್ಟ ಅಮ್ಮ: ಬೀಳುತ್ತಿರುವ ಮಗುವನ್ನು ಹಿಡಿಯಲು ಹೋಗಿ ತಾಯಿಯ ದಾರುಣ ಸಾವು

           ತಿರುವನಂತಪುರ : ಮಗುವಿನ ಜೀವ ಉಳಿಸಲು ಹೋಗಿ ಟೆರೇಸ್ ಮೇಲಿನಿಂದ ಹಾರಿ ಮಹಿಳೆಯೊಬ್ಬರು ಪ್ರಾಣ ಬಿಟ್ಟ ದಾರುಣ ಘಟನೆ ತಿರುವನಂತಪುರದಲ್ಲಿ ನಡೆದಿದೆ.


       ನೀಮಾ ಎನ್ನುವವರ ಆರು ತಿಂಗಳ ಮಗು ಟೆರೇಸ್​ ಮೇಲೆ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಮಗು ಕಾಲು ಜಾರಿ ಬೀಳುತ್ತಿದ್ದಂತೆಯೇ ತಾಯಿ ನೀಮಾ ಅದನ್ನು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರೇ ಟೆರೇಸ್​ ಮೇಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

      ಈ ಘಟನೆ ಕಳೆದ ಗುರುವಾರ ಮಧ್ಯಾಹ್ನ 12 ಗಂಟೆಯ ವೇಳೆ ನಡೆದಿದೆ. ನೀಮಾ ಅವರ ಪತಿ ಅಬು ಫಜಲ್ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಮನೆಯನ್ನು ಈಚೆಗೆ ಮಾರಿದ್ದರು. ಈ ಕಾರಣದಿಂದ ನೀಮಾ ಅವರು ಸಹೋದರಿಯ ಮನೆಯಲ್ಲಿ ಮಗುವಿನ ಜತೆ ವಾಸವಾಗಿದ್ದರು.

       ಮಧ್ಯಾಹ್ನ ಮಗುವಿನ ಜತೆ ನೀಮಾ ಟೆರೇಸ್​ ಮೇಲೆ ಹೋಗಿದ್ದಾಗ, ಬೀಳುತ್ತಿದ್ದ ಮಗು ರಕ್ಷಿಸಲು ಹೋಗಿದ್ದಾರೆ. ಈ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ಕೂಡಲೇ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries