ನವದೆಹಲಿ: ಮಹಿಳಾ ದಿನಾಚರಣೆಯಂತೆ 'ವಿಶ್ವ ಪುರುಷ ದಿನ'ವನ್ನೂ ಆಚರಿಸಬೇಕು ಎಂದು ಬಿಜೆಪಿ ಸಂಸದೆ ಸೋನಲ್ ಮಾನ್ಸಿಂಗ್ ಅವರು ಸೋಮವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.
ಬಜೆಟ್ ಅಧಿವೇಶನದ ಎರಡನೇ ಸೆಷನ್ ಇಂದಿನಿಂದ ಆರಂಭವಾಗಿದೆ. ಕರ್ನಾಟಕದ ರಾಜಕೀಯ ಧುರೀಣ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದಾರೆ. ಅಧಿವೇಶನದಲ್ಲಿ ಮಹಿಳಾ ದಿನದ ಅಂಗವಾಗಿ ಹಲವು ಸದಸ್ಯರು ಮಾತನಾಡಿದ್ದಾರೆ.
ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ವಿಶ್ವ ಮಹಿಳಾ ದಿನದ ಅಂಗವಾಗಿ ಶುಭಾಶಯ ಕೋರಿದ್ದು, ಮಹಿಳಾ ದಿನಾಚರಣೆಯು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕೊಡುಗೆಗಳನ್ನು ಮತ್ತು ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು, ಸಂಭ್ರಮಿಸಲು ಮತ್ತು ಗೌರವಿಸಲು ಇರುವ ದಿನವಾಗಿದೆ. ಸ್ತ್ರೀಯರ ದೃಢತೆ ಮತ್ತು ಪರಿಶ್ರಮ ಮುಖ್ಯವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿರುವ ಬಿಜೆಪಿ ನಾಯಕಿ, ಲೋಕಸಭಾ ಸದಸ್ಯೆ ಸೋನಲ್ ಮಾನ್ಸಿಂಗ್ ಅವರು, ವಿಶ್ವ ಮಹಿಳಾ ದಿನಾಚರಣೆಯಂತೆ ವಿಶ್ವ ಪುರುಷ ದಿನಾಚರಣೆಯನ್ನು ಕೂಡ ಆಚರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಎಂದು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿಯವರು ಅಂಕಿ ಅಂಶಗಳು ತೋರಿಸುವಂತೆ ಶೇ. 6ಕ್ಕಿಂತ ಹೆಚ್ಚು ಮಹಿಳೆಯರಿಗೆ ನಾಯಕತ್ವ ಲಭಿಸಿಲ್ಲ. ನಾವು ಈ ಬಗ್ಗೆ ಯೋಚಿಸಬೇಕು. ರಾಜ್ಯಸಭೆ ಮತ್ತು ಲೋಕಸಭೆಯ ಶೇ. 33 ಮಹಿಳಾ ಮೀಸಲಾತಿಯನ್ನು ಬಳಸಿಕೊಳ್ಳುವ ಮೂಲಕ ಈ ಬದಲಾವಣೆಗೆ ನಾಂದಿ ಹಾಡಬೇಕು ಎಂದು ಎನ್ಸಿಪಿ ಸದಸ್ಯೆ ಡಾ. ಫೌಜಿಯಾ ಖಾನ್ ಹೇಳಿದ್ದಾರೆ. 24 ವರ್ಷಗಳ ಹಿಂದೆ ನಾವು ಸಂಸತ್ತಿನಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿಗಾಗಿ ಬೇಡಿಕೆ ಇಟ್ಟೆವು. ಇಂದು 24 ವರ್ಷಗಳ ಬಳಿಕ ಈ ಮೀಸಲಾತಿ ಪ್ರಮಾಣವನ್ನು ಶೇ. 50ಕ್ಕೆ ಏರಿಕೆ ಮಾಡಬೇಕು ಎಂದು ತಿಳಿಸಿದ್ದಾರೆ.