ತಿರುವನಂತಪುರ: ಜಾರಿ ನಿರ್ದೇಶನಾಲಯದ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಮಹಾನಿರ್ದೇಶಕರಿಂದ ಕಾನೂನು ಸಲಹೆ ಕೋರಿದೆ. ಸ್ವಪ್ನಾ ಸುರೇಶ್ ಅವರದೆಂದು ಪ್ರಸಾರವಾದ ಆಡಿಯೋ ರೆಕಾರ್ಡಿಂಗ್ ಬಗ್ಗೆ ತನಿಖೆ ನಡೆಸಿದ ಅಪರಾಧ ವಿಭಾಗದ ತಂಡದ ವರದಿಯನ್ನು ಪರಿಗಣಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಸ್ವಪ್ನಾ ಅವರ ಧ್ವನಿ ಸಂದೇಶದ ಪ್ರಕಾರ, ಇಡಿ ಅಧಿಕಾರಿಗಳು ಸಿಎಂ ಹೆಸರನ್ನು ಹೇಳುವಂತೆ ಒತ್ತಾಯಿಸಲಾಗಿರುವುದಾಗಿ ತಿಳಿಯಲಾಗಿದೆ. ಮುಖ್ಯಮಂತ್ರಿಯವರು ಹೇಳಿಕೆ ನೀಡಲು ಒತ್ತಾಯಿಸುವುದರ ಆಡಿಯೋ ರೆಕಾರ್ಡಿಂಗ್ ಗಂಭೀರವಾಗಿದೆ ಎಂದು ಸರ್ಕಾರ ನಿರ್ಣಯಿಸಿದೆ.
ಈ ಸನ್ನಿವೇಶದಲ್ಲಿ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಕಾನೂನು ಸಲಹೆ ಪಡೆಯಲಾಗುತ್ತಿದೆ. ತನಿಖಾ ತಂಡದ ಪ್ರಕಾರ, ಮಾಧ್ಯಮಗಳಲ್ಲಿ ಸ್ವಪ್ನಾಳದೆಂದು ಹೇಳಲ್ಪಡುವ ಧ್ವನಿ ಸಂದೇಶ ಖಚಿತವಾಗಿಯೂ ಸ್ವಪ್ನಾಳದ್ದೇ ಎಂದು ದೃಢಪಡಿಸಲಾಗಿದೆ. ಮುಖ್ಯಮಂತ್ರಿ ವಿರುದ್ಧ ಸುಳ್ಳು ಮಾಹಿತಿ ನೀಡುವಂತೆ ಇಡಿ ಒತ್ತಾಯಿಸಲಾಯಿತು ಎಂದು ಸ್ವಪ್ನಾ ಭದ್ರತಾ ಕರ್ತವ್ಯದಲ್ಲಿದ್ದ ಪೋಲೀಸರಿಗೆ ತಿಳಿಸುವ ಅಡಿಯೋ ಇದೀಗ ಪ್ರಕರಣದ ದಿಕ್ಕನ್ನು ಬದಲಿಸುವ ಸಾಧ್ಯತೆ ಇದೆ.