ತಿರುವನಂತಪುರ: ಎನ್‍ಡಿಎ ಅಭ್ಯರ್ಥಿಗಳ ನಾಮಪತ್ರಿಕೆಗಳನ್ನು ತಿರಸ್ಕøತಗೊಳಿಸಿದ ಕ್ರಮವನ್ನು ಬಿಜೆಪಿ ರಾಜ್ಯ ಅಧ್ಯಕ್ಷರು ತೀವ್ರವಾಗಿ ಟೀಕಿಸಿದ್ದಾರೆ. ಈ ಕ್ರಮವು ರಾಜಕೀಯ ಪ್ರೇರಿತವಾಗಿದೆ ಮತ್ತು ಸಿಪಿಐ (ಎಂ) ಒತ್ತಡಕ್ಕೆ ಒಳಗಾಗಿದೆ ಎಂದು ಕೆ.ಸುರೇಂದ್ರನ್ ತಿಳಿಸಿದ್ದಾರೆ.
ಕಾನೂನುಬದ್ಧವಾಗಿ ವ್ಯವಹರಿಸಲಾಗುವುದು. ಎಲ್ಲಾ ಮೂರು ಕ್ಷೇತ್ರಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳನ್ನು ಹೊಂದಿರುತ್ತದೆ ಎಂದು ಕೆ.ಸುರೇಂದ್ರನ್ ಸ್ಪಷ್ಟಪಡಿಸಿದರು.
ಇದೇ ವೇಳೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕøತಗೊಂಡಿರುವುದರ ಹಿಂದೆ ಷಡ್ಯಂತ್ರವಿದ್ದು ಸಿಪಿಐ (ಎಂ)-ಬಿಜೆಪಿ ಹೊಂದಾಣಿಕೆ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ. ಅಧಿಕಾರವನ್ನು ಉಳಿಸಲು ಕೋಮು ಶಕ್ತಿಗಳೊಂದಿಗೆ ಶಾಮೀಲಾಗುವ ಮೂಲಕ ಶಾರ್ಟ್‍ಕಟ್ ದಾರಿಯ ಮೂಲಕ ಸಿಪಿಐ (ಎಂ) ಪ್ರಯತ್ನಿಸುತ್ತಿದೆ. ಸಂಘ ಪರಿವಾರ್ ಮತ್ತು ಸಿಪಿಎಂ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ತಿಳುವಳಿಕೆಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಪಿಐ (ಎಂ) ಬಿಜೆಪಿ ಮತಗಳನ್ನು ವ್ಯಾಪಕವಾಗಿ ಖರೀದಿಸುತ್ತಿದೆ ಎಂದು ಮುಲ್ಲಪ್ಪಳ್ಳಿ ಹೇಳಿದ್ದಾರೆ.