ನವದೆಹಲಿ: ಕಳೆದ ವಾರವಷ್ಟೇ ಕಾಂಗ್ರೆಸ್ ತೊರೆದಿದ್ದ ಹಿರಿಯ ಮುಖಂಡ ಪಿ. ಸಿ. ಚಾಕೊ ಮಂಗಳವಾರ ಶರದ್ ಪವರ್ ನೇತೃತ್ವದ ರಾಷ್ಟ್ರಿಯವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್ ಸಿಪಿ) ಸೇರ್ಪಡೆಯಾದರು.
ನಂತರ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪಿ. ಸಿ. ಚಾಕೊ, ಪ್ರತಿಪಕ್ಷಗಳು ಒಗ್ಗೂಡಿ ಬಿಜೆಪಿಗೆ ಪರ್ಯಾಯವಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ದಕ್ಷಿಣದ ರಾಜ್ಯಗಳಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ನೊಂದಿಗೆ ಎನ್ ಸಿಪಿ ಪಾಲುದಾರ ಪಕ್ಷವಾಗಿದ್ದು, ಏಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಡ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರು.
ಟಿಕೆಟ್ ವಿಚಾರದಲ್ಲಿ ಕೇರಳದ ಮುಖಂಡರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕಳೆದ ವಾರ ಚಾಕೊ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.