ಕೊಚ್ಚಿ: ಎರ್ನಾಕುಳಂ ಜಿಲ್ಲೆಯಲ್ಲಿ ಇಂದು ಎರಡು ಶಿಗೆಲ್ಲಾ ಪ್ರಕರಣಗಳು ವರದಿಯಾಗಿದೆ. ಕಲಾಡಿ ಪಂಚಾಯತ್ ನಲ್ಲಿ ಒಂದೇ ಮನೆಯಲ್ಲಿ 4 ಮತ್ತು 6 ರ ಹರೆಯದ ಮಕ್ಕಳಲ್ಲಿ ಶಿಗೆಲ್ಲಾ ದೃಢಪಟ್ಟಿದೆ. ಕೊರೊನಾ ಬಾಧಿಸಿ ಆಸ್ಪತ್ರೆಯಲ್ಲಿನ ಚಿಕಿತ್ಸೆಯಲ್ಲಿದ್ದ ಈ ಮಕ್ಕಳು ಇತ್ತೀಚೆಗೆ ಬಿಡುಗಡೆಗೊಂಡಿದ್ದರು. ಇದೀಗ ಶಿಗೆಲ್ಲಾ ಸೋಂಕು ಕಂಡುಬಂದು ಆತಂಕ ಮೂಡಿಸಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಮಕ್ಕಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿತ್ತು. ಆದರೆ ಇಂದು ಪರಿಶೋಧನೆ ನಡೆಸಲು ಆಸ್ಪತ್ರೆಗೆ ಆಗಮಿಸಿದಾಗ ಶಿಗೆಲ್ಲಾ ಪತ್ತೆಯಾಯಿತು. ಆರೋಗ್ಯ ಇಲಾಖೆ ಮತ್ತು ಪಂಚಾಯಿತಿಗಳು ಜಂಟಿಯಾಗಿ ಈ ಪ್ರದೇಶದಲ್ಲಿ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ರೋಗವು ಕುಡಿಯುವ ನೀರಿನಿಂದ ಹರಡುವ ಸಾಧ್ಯತೆ ಇರುವುದರಿಂದ ಈ ಪ್ರದೇಶದ ಬಾವಿಗಳಿಂದ ನೀರನ್ನು ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಪ್ರಸ್ತುತ ಈ ಪ್ರದೇಶದಲ್ಲಿ ಯಾರೂ ಇದೇ ರೀತಿಯ ರೋಗಲಕ್ಷಣಗಳು ಈ ವರೆಗೆ ಕಂಡುಬಂದಿಲ್ಲ.