ಮಧೂರು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕೂಡ್ಲು ಉಪಸಂಘದ ಐದನೇ ವಾರ್ಷಿಕ ಮಹಾಸಭೆ ಕೂಡ್ಲು ಪುರುಷೋತ್ತಮ ಅವರ ನಿವಾಸದಲ್ಲಿ ಇತ್ತೀಚೆಗೆ ಜರಗಿತು.
ಸಂಘದ ಅಧ್ಯಕ್ಷ ಬಿ.ಸತೀಶ ಕೂಡ್ಲು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಪ್ರದೀಪ್ ಬೇಕಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಹಿರಿಯ ಸದಸ್ಯ ಚಂದ್ರಶೇಖರ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಲಕ್ಷ್ಮೀಶ ಕೂಡ್ಲು ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಜಗದೀಶ್ ಕೂಡ್ಲು ಗತ ವರ್ಷದ ವರದಿಯ ಜತೆಯಲ್ಲಿ ಸಂಘದ ಕಾರ್ಯವೈಖರಿಗಳನ್ನು ವಿವರಿಸಿದರು.
ಕೆ.ಸತೀಶ್ ಕೂಡ್ಲು ಸ್ವಾಗತಿಸಿದರು. ತೇಜಶ್ರೀ ಕೂಡ್ಲು ವಂದಿಸಿದರು. ಸತೀಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.