ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇಗುಲದಲ್ಲಿ ವಿವಿಧ ವಿಧಿವಿಧಾನಗಳೊಂದಿಗೆ ಶಿವರಾತ್ರಿ ಮಹೋತ್ಸವ ಸಂಪನ್ನಗೊಂಡಿತು.
ಬೆಳಿಗ್ಗೆ ಉಷಃಕಾಲ ಪೂಜೆ, ಭಜನೆ, ಶಿವ ನಾಮಜಪಗಖಳು ನೆರವೇರಿದವು. ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅಗ್ನಿ,ಪುರುಷ ಸೂಕ್ತಗಳ ಪಠಣ ನೆರವೇರಿತು. ದೀಪಾರಾಧನೆ, ಕಾರ್ತಿಕಪೂಜೆ,ಸರ್ವಾಭರಣ ಸೇವೆಗಳು ನೆರವೇರಿದವು. ಶ್ರೀಕ್ಷೇತ್ರದ ಪವಿತ್ರಪಾಣಿ ಹಾಗೂ ಮೊಕ್ತೇಸರ ಎಸ್.ವಾಸುದೇವ ಭಟ್, ಶಿವರಾಜ ವಿ.ಸಂಕೇಸ ಮೊದಲಾದವರು ನೇತೃತ್ವ ವಹಿಸಿದ್ದರು.