ಕಾಸರಗೋಡು: ಪಾಲಕುನ್ನು ಕಯಕ್ಕಂ ಭಗವತೀ ಕ್ಷೇತ್ರದಲ್ಲಿ ಭರಣೀಮಹೋತ್ಸವ ಅಂಗವಾಗಿ ಧ್ವಜಾರೋಹಣ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಆನೆಚಪ್ಪರ ಏರಿಸುವ ಕಾರ್ಯಕ್ರಮದೊಂದಿಗೆ ಭರಣಿ ಬಾಲೆಯನ್ನು ನೇಮಿಸುವ ಕಾರ್ಯವೂ ನಡೆಯಿತು.
ಅನಘಾ ಎಂಬ ಬಾಲಕಿಗೆ ಅಕ್ಕಿ ಹಾಗೂ ಪ್ರಸಾದ ನೀಡುವ ಮೂಲಕ ಭರಣಿಬಾಲೆಯಾಗಿ ಆಯ್ಕೆಮಾಡುವ ಕಾರ್ಯ ಭಂಡಾರ ಮನೆಯಲ್ಲಿ ನೆರವೇರಿತು. ಕ್ಷೇತ್ರ ಸ್ಥಾನಿಕರು, ಭರಣಿ ಸಮಿತಿಯ ವಿವಿಧ ವಲಯ ಅಧ್ಯಕ್ಷರು, ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ತೃಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನ ಉತ್ಸವದ ಧ್ವಜಾವರೋಹಣದ ನಂತರ ಪಾಲಕುನ್ನು ಕಯಕ್ಕಂ ಭಗವತೀ ಕ್ಷೇತ್ರದಲ್ಲಿ ಧ್ವಜಾರೋಹಣ ನಡೆಯುವುದು ವಾಡಿಕೆಯಾಗಿದೆ.