ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಂಬಂಧ ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ ನಡೆಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಬ್ರಿಟನ್ ರಾಯಭಾರಿಗೆ ಸಮನ್ಸ್ ನೀಡಿದೆ.
ಯುಕೆ ಸಂಸತ್ತಿನಲ್ಲಿ ಭಾರತದ ಕೃಷಿ ಸುಧಾರಣೆಗಳ ಕುರಿತು 'ಅನಗತ್ಯ' ಚರ್ಚೆ ನಡೆಸಿರುವುದಕ್ಕೆ ಭಾರತ ಮಂಗಳವಾರ ಬ್ರಿಟಿಷ್ ರಾಯಭಾರಿಯನ್ನು ಕರೆದು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಅಲ್ಲದೆ ಇದು ಮತ್ತೊಂದು ದೇಶದ ರಾಜಕೀಯದಲ್ಲಿ 'ಸಂಪೂರ್ಣ ಹಸ್ತಕ್ಷೇಪ' ಎಂದು ವಿವರಿಸಿದೆ.
ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರು ರಾಯಭಾರಿಗೆ ಬ್ರಿಟಿಷ್ ಸಂಸದರು ಘಟನೆಗಳನ್ನು ತಪ್ಪಾಗಿ ನಿರೂಪಿಸುವ ಮೂಲಕ 'ಮತ ಬ್ಯಾಂಕ್ ರಾಜಕೀಯ' ಮಾಡುವುದರಿಂದ ದೂರವಿರಬೇಕು, ವಿಶೇಷವಾಗಿ ಮತ್ತೊಂದು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಕ್ರಮಗಳು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಸ್ಥಿತಿಗತಿ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಕುರಿತು ಬ್ರಿಟನ್ ಸಂಸತ್ತಿನ ಸದಸ್ಯರು ಸುಮಾರು 90 ನಿಮಿಗಲ ಕಾಲ ಚರ್ಚೆ ನಡೆಸಿದ್ದರು.