ಆಲಪ್ಪುಳ: ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರ ಮೇಲೆ ದ್ವಿ ಮತದಾನದ ಆರೋಪ ಬಂದೆರಗಿದೆ. ಚೆನ್ನಿತ್ತಲ ಅವರ ತಾಯಿ ದೇವಕಿ ಅಮ್ಮ ಎರಡು ಮತಗಳನ್ನು ಹೊಂದಿರುವುದು ಕಂಡುಬಂದಿದೆ. ಚೆಂಗನ್ನೂರು ಕ್ಷೇತ್ರದಲ್ಲಿ ದೇವಕಿಯಮ್ಮ ಅವರು ತ್ರಿಪ್ಪುನಿತ್ತುರ ಯುಪಿ ಶಾಲೆಯ ನಂ 1011 ಮತ್ತು ಹರಿಪ್ಪಾಡ್ ಮನ್ನರ್ಶಾಲ ಯುಪಿ ಶಾಲೆಯ ನಂ 1362 ಬೂತುಗಳಲ್ಲಿ ಮತದಾನದ ಹಕ್ಕಿರುವುದು ಮೇಲ್ನೋಟದಲ್ಲಿ ಕಂಡುಬಂದಿದೆ.
ಮತ್ತೊಂದೆಡೆ ಚೆನ್ನಿತ್ತಲ ಅವರ ಕುಟುಂಬದ ಇತರ ಸದಸ್ಯರೂ ಎರಡು ಮತಗಳನ್ನು ಹೊಂದಿರುವುದು ಕಂಡುಬಂದಿದೆ ಎನ್ನಲಾಗಿದೆ. ಆದಾಗ್ಯೂ, ಸಿಪಿಎಂ ನ್ನು ಗುರಿಯಾಗಿಸಿಕೊಂಡು ಮೋಸದ ಮತದಾನದ ಆರೋಪದ ನಡುವೆ ಇವುಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅವರ ಪತ್ನಿ ಅನಿತಾ ಮತ್ತು ಮಕ್ಕಳಾದ ರಮಿತ್ ಹಾಗೂ ರೋಹಿತ್ ಜೋಡಿ ಮತಗಳನ್ನು ಹೊಂದಿದ್ದರು. ಅವರ ಮತಗಳನ್ನು ತ್ರಿಪ್ಪುನಿತ್ತುರದಲ್ಲಿರುವ ಕುಟುಂಬ ಮನೆಯಲ್ಲಿ ಮತ್ತು ಹರಿಪ್ಪಾಡ್ ಕ್ಷೇತ್ರದ ಕ್ಯಾಂಪ್ ಕಚೇರಿಯ ಹೆಸರಲ್ಲಿದೆ.
ಚೆನ್ನಿತ್ತಲ ಅವರ ಕ್ಯಾಂಪ್ ಆಫೀಸ್ ಕಾರ್ಯನಿರ್ವಹಿಸುತ್ತಿರುವ ಮನೆ ಸಂಖ್ಯೆ 12/481 ರಲ್ಲಿ ಶಾಶ್ವತ ನಿವಾಸದ ಪ್ರಮಾಣಪತ್ರದ ಆಧಾರದ ಮೇಲೆ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಚೆನ್ನಿತ್ತಲ ಮತ್ತು ಅವರ ಕುಟುಂಬ ಎಷ್ಟು ದಿನ ಇಲ್ಲಿಯೇ ಇರುತ್ತಾರೆ ಎಂಬ ಬಗ್ಗೆ ಅರ್ಜಿಯಲ್ಲಿ ಹೇಳಲಾಗಿಲ್ಲ. ಇವರೆಲ್ಲರೂ ಈ ಹಿಂದೆ ಕೊಟ್ಟೂರು ಈಸ್ಟ್ ತ್ರಿಪ್ಪುನಿತ್ತುರಾದಲ್ಲಿರುವ ಕುಟುಂಬ ಮನೆಯ ವಿಳಾಸದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದರು.