ಸಮರಸ ಚಿತ್ರ ಸುದ್ದಿ: ಕಾಸರಗೋಡು: ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆ ಖಂಡಿಸಿ ಕೇರಳ ಹೋಟೆಲ್ ಆ್ಯಂಡ್ ರೆಸ್ಟಾರೆಂಟ್ ಅಸೋಸಿಯೇಶನ್ ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಮುಖ್ಯ ಅಂಚೆಕಚೇರಿ ಎದುರು ಮಂಗಳವಾರ ಕೇಶಮುಂಡನ ನಡೆಸುವ ಮೂಲಕ ಪ್ರತಿಭಟನೆ ಹಮ್ಮಿಕೊಂಡರು. ಸಂಘಟನೆ ಪದಾಧಿಕಾರಿಗಳಾದ ಎನ್. ಅಬ್ದುಲ್ಲ ತಾಜ್, ನಾರಾಯಣ ಪೂಜಾರಿ, ಹನೀಶ್ ತಾಷ್ಕೆಂಟ್, ಕೆ.ಎಚ್. ಅಬ್ದುಲ್ಲ, ಮಹಮ್ಮದ್ ಗಸಾಲಿ, ವೆಂಕಟ್ರಮಣ ಹೊಳ್ಳ, ರಾಮಪ್ರಸಾದ್ ಮುಂತಾದವರು ನೇತೃತ್ವ ನೀಡಿದರು.