ಮುಂಬೈ: ಜನಪ್ರಿಯ ಓಟಿಟಿ ತಾಣವಾದ ನೆಟ್ಪ್ಲಿಕ್ಸ್ನ್ನು ಭಾರತದಲ್ಲಿಯೂ ಸಾಕಷ್ಟು ಜನ ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಮನರಂಜನೆಗಾಗಿ ಓಟಿಟಿ ವೇದಿಕೆಗಳ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ.
ಆದರೆ, ನೆಟ್ಪ್ಲಿಕ್ಸ್ ಸಂಸ್ಥೆಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಅದೇನಪ್ಪಾ ಅಂದರೆ, ನೆಟ್ಪ್ಲಿಕ್ಸ್ನಲ್ಲಿ ಇರುವ ಅಕೌಂಟ್ ಶೇರಿಂಗ್ ಆಯ್ಕೆ. ಈ ಅಕೌಂಟ್ ಶೇರಿಂಗ್ ಹಾಗೂ ಪಾಸ್ವರ್ಡ್ ಶೇರಿಂಗ್ ನಿಂದ ನೆಟ್ಪ್ಲಿಕ್ಸ್ಗೆ ಸಾಕಷ್ಟು ಹಾನಿಯಾಗುತ್ತಿದೆಯಂತೆ. ಈ ನಿಟ್ಟಿನಲ್ಲಿ ಇದನ್ನು ತಡೆಗಟ್ಟಲು ಕಂಪೆನಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ನೆಟ್ಪ್ಲಿಕ್ಸ್ ಅಕೌಂಟ್ ಹೊಂದಿರುವವರು ತಮಗೆ ಬೇಕಿನಿಸಿದಾಗ ಪಾಸ್ವರ್ಡ್ನ್ನು ತಮ್ಮ ಸ್ನೇಹಿತರ ಜೊತೆ ಹಂಚಿಕೊಂಡರೇ ಅವರೂ ಕೂಡ ನೆಟ್ಪ್ಲಿಕ್ಸ್ನ್ನು ಹಣ ಪಾವತಿಸದೇ ಬಳಸಬಹುದಾಗಿದೆ. ಈ ಮಾರ್ಗವನ್ನೇ ಅನೇಕರು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ನೆಟ್ಪ್ಲಿಕ್ಸ್ ಈ ಮಾರ್ಗದ ಕಡಿವಾಣಕ್ಕೆ ಮುಂದಾಗಿದೆ.
ಸದ್ಯ ಈ ಆಯ್ಕೆಯನ್ನು ತೆಗೆಯುವುದಕ್ಕಾಗಿ ಟ್ರಯಲ್ ರನ್ ನ್ನು ನೆಟ್ಪ್ಲಿಕ್ಸ್ ನಡೆಸುತ್ತಿದೆ. ಇದು ಯಶಸ್ವಿಯಾದರೇ ಜಾರಿಗೊಳಿಸಲು ಮುಂದಾಗಿದೆ. ಇದು ಜಾರಿಗೆ ಬಂದರೆ ಮತ್ತೊಬ್ಬರ ಪಾಸ್ವರ್ಡ್ ಮೂಲಕ ನೆಟ್ಪ್ಲಿಕ್ಸ್ ವೀಕ್ಷಿಸುವುದು ಅಸಾಧ್ಯವಾಗುತ್ತದೆ.