ತಿರುವನಂತಪುರ: ಇಡಿ ವಿರುದ್ಧ ಪೋಲೀಸ್ ಅಧಿಕಾರಿಗಳ ಹೇಳಿಕೆಯ ಹಿಂದೆ ಸರ್ಕಾರ ಮತ್ತು ಸಿಪಿಎಂ ಕೈವಾಡವಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಖಚಿತಪಡಿಸಿದೆ. ಗುಪ್ತಚರ ಮೂಲಗಳ ಪ್ರಕಾರ, ಸಿಪಿಎಂ ಪರವಾಗಿರುವ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಿದೆ. ಗುಪ್ತಚರ ವರದಿಯನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಇಡಿ ಕ್ರಮಗಳನ್ನು ಬಿಗಿಗೊಳಿಸಲಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಸಾಕ್ಷಿ ಹೇಳುವಂತೆ ಜಾರಿ ನಿರ್ದೇಶನಾಲಯ ಸ್ವಪ್ನಾ ಸುರೇಶಳನ್ನು ಒತ್ತಾಯಿಸಿದೆ ಎಂದು ಕೇರಳ ಪೋಲೀಸರ ಇಬ್ಬರು ಮಹಿಳಾ ನಾಗರಿಕ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದರು. ಅಪರಾಧ ವಿಭಾಗ ದಾಖಲಿಸಿದ ಹೇಳಿಕೆಗಳನ್ನು ತನಿಖಾ ತಂಡ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡಿತ್ತು. ಡಾಲರ್ ಹಗರಣದಲ್ಲಿ ಸಿಎಂ ಪಾತ್ರವನ್ನು ಬಹಿರಂಗಪಡಿಸುವ ಅಫಿಡವಿಟ್ ಬಿಡುಗಡೆ ಮಾಡಿದ ಸಂದರ್ಭ ಇಂತಹ ಘಟನೆ ಬೆಳಕಿಗೆ ಬಂದಿದೆ. ತರುವಾಯ, ಇ.ಡಿ.ಯ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಂಡಿತ್ತು. ಆದರೆ ಇಡಿ ವಿರುದ್ಧದ ಕಾನೂನು ಕ್ರಮದ ಹಿಂದೆ ಸರ್ಕಾರ ಮತ್ತು ಸಿಪಿಎಂ ಕೈವಾಡವಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ವರದಿ ಮಾಡಿದೆ.
ಸಿಪಿಎಂ ಸಂಬಂಧಿತ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸುವ ಹಿಂದೆ ಪಿತೂರಿ ಇದೆ. ಪೋಲೀಸ್ ಅಧಿಕಾರಿಗಳ ಸಂಘದ ಕೆಲವು ರಾಜ್ಯ ನಾಯಕರು ಇದರ ಹಿಂದೆ ಇದ್ದಾರೆ ಎಂದು ಗುಪ್ತಚರ ಸಂಸ್ಥೆ ಕಂಡುಹಿಡಿದಿದೆ. ಗುಪ್ತಚರ ವರದಿಯನ್ನು ಆಧರಿಸಿ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶವನ್ನು ಇಡಿ ಇದೀಗ ಚಿಂತಿಸಿದೆ. ವಿಚಾರಣೆ ಮತ್ತು ಅನುಸರಣೆಯನ್ನು ಇಡಿ ವಿಡಿಯೋ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ.
ಭದ್ರತಾ ಕರ್ತವ್ಯದ ಹೆಸರಿನಲ್ಲಿ ಬಂದ ಅಧಿಕಾರಿಗಳು ರಾಜ್ಯ ಸರ್ಕಾರಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಇಡಿ ಗಮನಸೆಳೆಯಲಿದೆ. ಈ ಸಂಬಂಧ ನ್ಯಾಯಾಲಯಕ್ಕೆ ವೈಜ್ಞಾನಿಕ ಪುರಾವೆಗಳನ್ನು ಸಲ್ಲಿಸಲು ತನಿಖಾ ತಂಡ ನಿರ್ಧರಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ಶಾಖೆ ಅಧಿಕಾರಿಗಳ ಸಿಪಿಎಂ ಲಿಂಕ್‍ಗಳ ಬಗ್ಗೆಯೂ ಗುಪ್ತಚರ ಮಾಹಿತಿ ನೀಡಿದೆ.