ಕೊಚ್ಚಿ: ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ವಿಧಾನ ಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಶನಿವಾರ ಕಾಲಡಿ ಆದಿ ಶಂಕರ ಜನ್ಮಭೂಮಿ ದೇವಸ್ಥಾನ ಮತ್ತು ಕಾಲಡಿ ಆದಿ ಶಂಕರ ಕೀರ್ತಿ ಮಂಟಪಕ್ಕೆ ಭೇಟಿ ನೀಡಿದರು. ಆದಿಶಂಕರ ಜನ್ಮಭೂಮಿ ದೇವಾಲಯದ ಸಹಾಯಕ ವ್ಯವಸ್ಥಾಪಕ ಸೂರ್ಯನಾರಾಯಣ ಭಟ್ ಅವರು ಪೆÇನ್ನಡದಲ್ಲಿ ತೇಜಸ್ವಿ ಸೂರ್ಯ ಅವರನ್ನು ಸ್ವಾಗತಿಸಿದರು. ನಂತರ ಅವರು ಕಾಲಡಿ ಶ್ರೀ ಕೃಷ್ಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಇಂದು ದೇಶದಲ್ಲಿ ಜನರನ್ನು ಅಭಿವೃದ್ದಿಯ ಪಥದತ್ತ ಮುನ್ನಡೆಸುತ್ತಿರುವ ಏಕೈಕ ಪಕ್ಷ ಇದ್ದರೆ ಅದು ಬಿಜೆಪಿ ಎಂದು ತೇಜಸ್ವಿ ಸೂರ್ಯ ಹೇಳಿದರು. ಬಡ ಕುಟುಂಬಗಳ ಅನೇಕ ಜನರಿಗೆ ಮುನ್ನಲೆಗೆ ಬರಲು ಬಿಜೆಪಿ ಅವಕಾಶ ನೀಡುತ್ತಿದೆ. ಎಲ್ಲಾ ವಿದ್ಯಾವಂತ ಯುವಕರು ಕೇರಳದಿಂದ ಹೊರಗೆ ಹೋಗಲು ಬಯಸುತ್ತಾರೆ. ಕೇರಳದಲ್ಲಿ ಕಡಿಮೆ ಉದ್ಯೋಗಾವಕಾಶವಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.
ಕಮ್ಯುನಿಸ್ಟರು ಭಸ್ಮಾಸುರರಂತೆ. ಅವರು ಏನನ್ನು ಮುಟ್ಟಿದರೂ ಅದು ನಾಶವಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಕಮ್ಯುನಿಸ್ಟರು ಕೇರಳಕ್ಕಾಗಿ ಏನು ಮಾಡಿದ್ದಾರೆ ಎಂದು ಅವಲೋಕಿಸಿದರೆ ಎಡ ಸರ್ಕಾರವು ರಾಜ್ಯಕ್ಕೆ ಅಭಿವೃದ್ಧಿಯ ಹಿನ್ನಡೆಗೆ ಕಾರಣರಾದರು ಎಂದು ಹೇಳಿದರು. ಕೇರಳದಲ್ಲಿ ನಿರುದ್ಯೋಗ, ಬಡತನ ಮತ್ತು ವಲಸೆಯ ಹೆಚ್ಚಳವು ಕಮ್ಯುನಿಸ್ಟ್ ಪಕ್ಷದಿಂದಾಗಿ ಎಂದು ಅವರು ಗಮನಸೆಳೆದರು.
ಅಂಗಮಾಲಿ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ವಕೀಲ ಕೆ.ವಿ.ಸಾಬು, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗಣೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿ.ಕೆ.ಭಾಸಿತ್ ಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಷ್ಣು ಸುರೇಶ್ ಮತ್ತು ಬಿಜೆಪಿ ಅಂಗಮಾಲಿ ಕ್ಷೇತ್ರದ ಅಧ್ಯಕ್ಷ ಎನ್ ಮನೋಜ್ ಉಪಸ್ಥಿತರಿದ್ದರು.