ಜೈಪುರ: ರಾಜಸ್ಥಾನದಲ್ಲಿ ರಜಪೂತ ಯುವಕರನ್ನು ಮದುವೆಯಾದ ಎರಡು ವರ್ಷಗಳ ನಂತರ ಇಬ್ಬರು ಪಾಕಿಸ್ತಾನಿ ಹಿಂದೂ ಮಹಿಳೆಯರು ಅಂತಿಮವಾಗಿ ತಮ್ಮ ಗಂಡಂದಿರೊಂದಿಗೆ ಸೇರಿಕೊಂಡಿದ್ದಾರೆ.
ಎರಡು ವರ್ಷಗಳ ನಂತರ ಇಬ್ಬರು ವಧುಗಳು ತಮ್ಮ ಮಾವನ ಮನೆಗೆ ಬಂದಿದ್ದು ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇಬ್ಬರು ವಧುಗಳನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಲಾಯಿತು.
ಮಹೇಂದ್ರ ಸಿಂಗ್ ಪತ್ನಿ ಚಗನ್ ಕನ್ವರ್ ಮತ್ತು ನೇಪಾಳ್ ಸಿಂಗ್ ಭಾತಿ ಪತ್ನಿ ಕೈಲಾಸ್ ಬಾಯಿ ರಾಜಸ್ಥಾನದ ಬಾರ್ಮರ್ ಮತ್ತು ಜೈಸ್ಮಲೇರ್ ಗೆ ಆಗಮಿಸಿದ್ದಾರೆ. ಇವರು 2019ರಲ್ಲಿ ವಿವಾಹವಾಗಿದ್ದರು. ಆದರೆ ವೀಸಾ ಸಿಗದ ಕಾರಣ ಇಬ್ಬರು ವಧುಗಳು ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ, ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತು ಬಾಲಕೋಟ್ ವೈಮಾನಿಕ ದಾಳಿಯ ನಂತರ ಅವರ ವಿವಾಹಗಳು ಶೀಘ್ರವಾಗಿ ನಡೆದಿದ್ದವು.
ಆದರೆ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿದ್ದ ಉದ್ವಿಘ್ನತೆಯಿಂದ ದಂಪತಿಯನ್ನು ಬಲವಂತವಾಗಿ ಪ್ರತ್ಯೇಕವಾಗಿರಿಸಲಾಗಿತ್ತು. ಈ ಭಾರತಕ್ಕೆ ಬರಲು ವೀಸಾ ಸಿಕ್ಕಿರುವ ಹಿನ್ನೆಲೆಯಲ್ಲಿ ಇಬ್ಬರು ವಧುಗಳು ಸಂತೋಷವಾಗಿದ್ದಾರೆ.
ವೀಸಾ ಸಿಗಲು ವಿಳಂಬವಾದ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ನಮ್ಮ ಮುಂದಿನ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರು. ಆದರೆ ಈಗ ನಮಗೆ ವಿವಾಹವಾಗಿರುವ ಭಾವನೆ ಬರುತ್ತಿದೆ, ನಾವು ಸಂತೋಷವಾಗಿದ್ದೇವೆ ಎಂದು ಹೇಳಿದ್ದಾರೆ,
ಅವರ ಪತಿ ಮಹೇಂದ್ರ ಸಿಂಗ್ ಕೂಡ ರೋಮಾಂಚನಗೊಂಡರು. 'ಕಳೆದ ಎರಡು ವರ್ಷಗಳು ನಮಗೆ ದುಃಸ್ವಪ್ನದಂತೆ ಇದ್ದವು. ನಮ್ಮ ಮದುವೆಯ ನಂತರ ನಾವು ಮೂರು ತಿಂಗಳು ಪಾಕಿಸ್ತಾನದಲ್ಲಿದ್ದೆವು ಆದರೆ ನನ್ನ ಹೆಂಡತಿಗೆ ವೀಸಾ ಪಡೆಯಲು ಸಾಧ್ಯವಾಗಲಿಲ್ಲ. ನಾನು ಭಾರತಕ್ಕೆ ಮಾತ್ರ ಮರಳಿದ್ದೇನೆ ಆದರೆ ನನ್ನ ವಧುವನ್ನು ಭಾರತಕ್ಕೆ ಕರೆತರಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೆವು. ನಾನು ಈಗ ತುಂಬಾ ಸಂತೋಷವಾಗಿದ್ದೇನೆ ಎಂದು ತಿಳಿಸಿದ್ದಾರೆ. ಪ್ರಶ್ನಿಸಿದ ಇಬ್ಬರು ವಧುಗಳಿಗೆ ಕರಾಚಿಯ ಭಾರತೀಯ
ದೂತಾವಾಸ ಕಚೇರಿಯು ದೀರ್ಘಾವಧಿಯ ವೀಸಾ (ಎಲ್‌ಟಿವಿ) ನೀಡಿದ್ದು, ಭಾರತಕ್ಕೆ ಬರಲು ಸಾಧ್ಯವಾಗಿದೆ.