ಮಂಜೇಶ್ವರ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ, ಮಂಜೇಶ್ವರ ಉಪಜಿಲ್ಲಾ ಘಟಕದ ವತಿಯಿಂದ ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗುವ ಮಂಜೇಶ್ವರ ಉಪಜಿಲ್ಲೆಯ ಕನ್ನಡ ಮಾಧ್ಯಮ ಅಧ್ಯಾಪಕ-ಅಧ್ಯಾಪಿಕೆಯರಿಗೆ ವಿದಾಯಕೂಟ ಸಮಾರಂಭ ಐಲ ಶ್ರೀ ಶಾರದಾ ಬೋವೀಸ್ ಎ.ಯು.ಪಿ. ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ ಉದ್ಘಾಟಿಸಿ ಮಾತನಾಡುತ್ತಾ 'ನಿವೃತ್ತಿಯಾಗುತ್ತಿರುವವರ ಅನುಭವಗಳು ಮುಂದಿನವರಿಗೆ ದಾರಿದೀಪವಾಗಲಿ. ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾರ್ಯಚಟುವಟಿಕೆಗಳು ಕನ್ನಡ ಮಕ್ಕಳಿಗೂ, ಅಧ್ಯಾಪಕರಿಗೂ ತುಂಬಾ ಪ್ರಯೋಜನಕಾರಿಯಾಗಿದೆ.' ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಉಮೇಶ ಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಲ ಶ್ರೀ ಶಾರದಾ ಬೋವೀಸ್ ಎ.ಯು.ಪಿ. ಶಾಲೆಯ ಪ್ರಬಂಧಕರಾದ ಆನಂದ್ ಕೆ ಐಲ್, ಮಂಜೇಶ್ವರ ಬಿ. ಆರ್. ಸಿ ಯ ಬ್ಲಾಕ್ ಪೆÇ್ರೀಗ್ರಾಂ ಕೋರ್ಡಿನೇಟರ್ ಆದರ್ಶ್ ಬಿ. ಪಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕೇಂದ್ರ ಸಮಿತಿಯ ಮಾಜಿ ಉಪಾಧ್ಯಕ್ಷೆ ಶ್ರೀಕುಮಾರಿ ಆಗಮಿಸಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಪಿ. ಬಿ. ಶ್ರೀನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ರವೀಂದ್ರನಾಥ ಕೆ. ಆರ್, ಕೋಶಾಧಿಕಾರಿ ಪದ್ಮಾವತಿ ಎಂ, ಕಾರ್ಯದರ್ಶಿ ಸುಕೇಶ್ ಎ, ಐಲ ಶ್ರೀ ಶಾರದಾ ಬೋವೀಸ್ ಎ.ಯು.ಪಿ. ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ಶುಭಾಶಂಸನೆಗೈದರು. ಸಂಘಟನೆಯ ಪರವಾಗಿ ಗಣ್ಯರು ನಿವೃತ್ತರಾಗುವ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನಿತರ ಪರವಾಗಿ ಹಲವರು ಶಿಕ್ಷಕರು ತಮ್ಮ ಮನದಾಳದ ಮಾತುಗಳನ್ನು ನೆನಪಿನ ಬುತ್ತಿಯನ್ನು ಬಿಚ್ಚಿಟ್ಟು ಹಂಚಿಕೊಂಡರು. ಮಂಜೇಶ್ವರ ಉಪಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀರಾಮ ಕೆದುಕೋಡಿ ಸ್ವಾಗತಿಸಿ, ಕೋಶಾಧಿಕಾರಿ ಜೀವನ್ ಕುಮಾರ್ ವಂದಿಸಿದರು. ಉಪ ಕಾರ್ಯದರ್ಶಿ ಕವಿತಾ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಕೇಂದ್ರ ಮತ್ತು ಮಂಜೇಶ್ವರ ಉಪಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.