HEALTH TIPS

ಚತ್ತೀಸ್ ಗಢ: ಇಬ್ಬರು ಪ್ರಮುಖ, ಮೋಸ್ಟ್ ವಾಂಟೆಡ್ ಮಾವೋವಾದಿಗಳ ಹತ್ಯೆ

           ರಾಯ್ ಪುರ: ಚತ್ತೀಸ್ ಗಢದಲ್ಲಿ ಇಬ್ಬರು ಪ್ರಮುಖ, ಮೋಸ್ಟ್ ವಾಂಟೆಡ್ ಮಾವೋವಾದಿಗಳು ಭದ್ರತಾ ಪಡೆಗಳೊಂದಿಗೆ ದಾಂತೆವಾಡದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಹತ್ಯೆಯಾಗಿದ್ದಾರೆ.


       ಸಿಪಿಐ(ಎಂ) ನ ಹಿರಿಯ ಕಾರ್ಯಕರ್ತರು ಇವರಾಗಿದ್ದು, ಇವರನ್ನು ಹುಡುಕಿಕೊಟ್ಟವರಿಗೆ ಬಹುಮಾನವನ್ನೂ ಈ ಹಿಂದೆ ಘೋಷಿಸಲಾಗಿತ್ತು.

          "ಜಿಲ್ಲಾ ಮೀಸಲು ಗಾರ್ಡ್ ಗಳ ತಂಡ ಕವಾಸಿಪಾರದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಮಾವೋವಾದಿಗಳೊಂದಿಗೆ ಗುಂಡಿನ ಕಾಳಗ ನಡೆದಿದ್ದು, ಪ್ರತಿ ದಾಳಿಯಲ್ಲಿ ಭದ್ರತಾ ಸಿಬ್ಬಂದಿಗಳು ಇಬ್ಬರು ಮಾವೋವಾದಿ ಕಮಾಂಡರ್ ಗಳನ್ನು ಹತ್ಯೆ ಮಾಡಿದ್ದಾರೆ. ಇಬ್ಬರು ಹತ್ಯೆಯಾದ ಮಾವೋವಾದಿಗಳಿಂದ 5 ಕೆಜಿಯಷ್ಟು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಾಂತೆವಾಡದ ಎಸ್ ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

       ಮೃತ ಮಾವೋವಾದಿಗಳನ್ನು ಮಾದ್ವಿ ಹದ್ಮಾ, ಡೆಪ್ಯುಟಿ ಕಮಾಂಡಾರ್, ಕಮಾಂಡರ್ ಆಗಿದ್ದ ಆಯತಾ ಎಟೆಪಾಲ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಹುಡುಕಿಕೊಟ್ಟವರಿಗೆ ಅನುಕ್ರಮವಾಗಿ 3 ಲಕ್ಷ ಹಾಗೂ ಒಂದು ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries