ಕೊಚ್ಚಿ: ಪೋಲೀಸ್ ಠಾಣೆಗೆ ಆಗಮಿಸುವವರಿಗೆ ಚಹಾ ಮತ್ತು ತಿಂಡಿ ವಿತರಿಸಿದ್ದಕ್ಕಾಗಿ ಅಮಾನತುಗೊಂಡಿರುವ ಸಿಪಿಒ ಪಿಎಸ್ ರಘು ಅವರ ಫೇಸ್‍ಬುಕ್ ಪೆÇೀಸ್ಟ್ ಕುರಿತು ಭಾರೀ ಚರ್ಚೆಗಳೆದ್ದಿವೆ. "ಸಾವು ಎಲ್ಲವನ್ನೂ ಕೊನೆಗೊಳಿಸುತ್ತದ್ದೇನೆ? ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳಲ್ಲ. ಅವರು ಸೊಕ್ಕಿರುವವರು" ಎಂದು ರಘು ಅವರ ಫೇಸ್‍ಬುಕ್ ಪೋಸ್ಟ್ ಕಳವಳ, ಚರ್ಚೆಗೆ ಗ್ರಾಸವಾಗಿದೆ. ಪಿ.ಎಸ್.ರಘು ಅವರು 20 ಕ್ಕೂ ಹೆಚ್ಚು ಉತ್ತಮ ಸೇವಾ ನಮೂದುಗಳನ್ನು ಪಡೆದ ಅಧಿಕಾರಿ.
ಕಳಮಸ್ಸೆರಿ ಪೋಲೀಸ್ ಠಾಣೆಯಲ್ಲಿ ಕಾಫಿ ಯಂತ್ರವನ್ನು ಸ್ಥಾಪಿಸಿದ್ದಕ್ಕಾಗಿ ಪಿ.ಸಿ.ರಘು ಅವರನ್ನು ಡಿಸಿಪಿ ಐಶ್ವರ್ಯಾ ಡೊಂಗ್ರೆ ಅಮಾನತುಗೊಳಿಸಿದ್ದಾರೆ. ರಘು ನೇತೃತ್ವದಲ್ಲಿ ಠಾಣೆಯಲ್ಲಿರುವ ಪೋಲೀಸರು ಠಾಣೆಗೆ ಬರುವ ಸಾರ್ವಜನಿಕರಿಗೆ ಚಹಾ, ಬಿಸ್ಕತ್ತು ಮತ್ತು ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದ್ದರು. ಪೋಲೀಸರು ಸಾರ್ವಜನಿಕರೊಂದಿಗೆ ಸ್ನೇಹದಿಂದ ಮುಂದುವರಿಯಬೇಕು ಎಂಬ ಡಿಜಿಪಿ ನಿರ್ದೇಶನದ ಹಿನ್ನೆಲೆಯಲ್ಲಿ ಅಕ್ಷಯ ಪತ್ರಂ ಯೋಜನೆಯನ್ನು ಈ ಹೊಸ ಅವಿಷ್ಕಾರದೊಂದಿಗೆ ಜಾರಿಗೆ ತಂದಿದ್ದರು.
ಯೋಜನೆಯನ್ನು ಉದ್ಘಾಟಿಸಿದ ಮತ್ತು ಮಾಧ್ಯಮಗಳೊಂದಿಗೆ ತನ್ನ ಮೇಲಧಿಕಾರಿಗಳಿಗೆ ತಿಳಿಸದೆ ಮಾತನಾಡಿದ್ದಕ್ಕಾಗಿ ರಘು ಅವರನ್ನು ಅಮಾನತುಗೊಳಿಸಲಾಗಿದೆ. ರಘು ವಿರುದ್ಧ ಹಣ ವರ್ಗಾವಣೆ ಆರೋಪವನ್ನು ಉಲ್ಲೇಖಿಸಿ ಈ ಪ್ರಕರಣದ ತನಿಖೆ ನಡೆಸಲು ನಾರ್ಕೋಟಿಕ್ಸ್ ಸೆಲ್ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿತ್ತು.
ಉದ್ಘಾಟನೆಗೆ ಡಿಸಿಪಿಯನ್ನು ಆಹ್ವಾನಿಸದಿರುವ ಕೋಪದಿಂದ ಅಮಾನತುಗೊಳಪಡಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಸಿಪಿಒ ರಘು ಅವರು ಈಗಾಗಲೇ ಅತ್ಯುತ್ತಮ ಜನಪರ ಕಾರ್ಯಚಟುವಟಿಕೆಗಳ ಮೂಲಕ ಗಮನ ಸೆಳೆದ ಅಧಿಕಾರಿ. ಕೋವಿಡ್ ವ್ಯಾಪಕತೆಯ ಸಂದರ್ಭ ತನ್ನ ಪರ್ಸ್ ಕಳೆದುಕೊಂಡಿದ್ದ ಫ್ರೆಂಚ್ ಮಹಿಳೆಗೆ ರಘು ಆಹಾರವನ್ನು ಖರೀದಿಸಿ ಫ್ರೆಂಚ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ಆ ದಿನ ಕೊಚ್ಚಿ ಐಜಿ ವಿಜಯ್ ಸಖಾರೆ ಅವರು ರಘು ಅವರಿಗೆ ನಗದು ಪ್ರಶಸ್ತಿ ಮತ್ತು ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಿದ್ದರು.