ತಿರುವನಂತಪುರಂ: ಏಪ್ರಿಲ್ 1 ರಿಂದ ವಿಶು ಕಿಟ್‍ಗಳ ವಿತರಣೆ ಆರಂಭಿಸಿದರೆ ಸಾಕು ಎಂದು ಆಹಾರ ಇಲಾಖೆ ನಿರ್ಧರಿಸಿದೆ. ಪ್ರತಿಪಕ್ಷಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಳದಿ ಮತ್ತು ಗುಲಾಬಿ ಕಾರ್ಡುದಾರರಿಗೆ ಕಿಟ್ ವಿತರಣೆ ಈ ತಿಂಗಳ ಅಂತ್ಯದ ವರೆಗೆ ಮುಂದೂಡಲಾಗಿದೆ.
ಮಾರ್ಚ್ 31 ರ ಮೊದಲು ಎಎವೈ ಕಾರ್ಡ್ ದಾರರಿಗೆ ಕಿಟ್ ವಿತರಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ವಿಷು ಹಬ್ಬ ಸಂಬಂಧಿ ಅಕ್ಕಿ ಸರಬರಾಜನ್ನು ನಿರ್ಬಂಧಿಸಿದ್ದಕ್ಕಾಗಿ ಚುನಾವಣಾ ಆಯೋಗದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಹಾರ ಇಲಾಖೆ ನಿರ್ಧರಿಸಿದೆ.
ನೀಲಿ ಮತ್ತು ಬಿಳಿ ಕಾರ್ಡ್ ಹೊಂದಿರುವವರಿಗೆ ವಿಶೇಷ ಅಕ್ಕಿ ನಿಷೇಧವನ್ನು ಮರುಪರಿಶೀಲಿಸುವಂತೆ ಆಹಾರ ಇಲಾಖೆಯು ಚುನಾವಣಾ ಆಯೋಗವನ್ನು ಕೇಳಲಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ 15 ರೂ. ದರದಲ್ಲಿ 10 ಕೆಜಿ ಅಕ್ಕಿ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈಸ್ಟರ್, ವಿಶು ಮತ್ತು ರಂಜಾನ್ ಹಬ್ಬವನ್ನು ಆಚರಿಸಲು ಈ ಕಿಟ್ ವಿತರಿಸುವುದಾಗಿ ಸರ್ಕಾರ ತಿಳಿಸಿತ್ತು.
ಈ ಹಿಂದೆ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರು ಸರ್ಕಾರವು ಕಿಟ್ ವಿತರಣೆ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಗೆ ದೂರು ನೀಡಿದ್ದರು.