ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಮೆರಿಕ ಮೂಲದ ಲಸಿಕೆ ತಯಾರಿಕಾ ಕಂಪನಿ ನೊವಾವಾಕ್ಸ್ ಇಂಕ್ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಮತ್ತು ಭಾರತದಲ್ಲಿ ಕೋವಿಡ್ ಲಸಿಕೆ ಅಭಿವೃದ್ದಿಗೆ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಜೊತೆಗಿನ ಪರವಾನಗಿ ಒಪ್ಪಂದನ್ನು ಘೋಷಿಸಿತ್ತು.
ನೊವಾವಾಕ್ಸ್ ಮತ್ತು ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಪಾಲುದಾರಿಕೆಯಲ್ಲಿ ತಯಾರಿಸಿರುವ ಕೊವೊವಾಕ್ಸ್ ಪ್ರಯೋಗ ಅಂತಿಮವಾಗಿ ದೇಶದಲ್ಲಿ ಆರಂಭವಾಗಿದೆ. ಆಫ್ರಿಕಾ ಮತ್ತು ಇಂಗ್ಲೆಂಡ್ ನ ಕೋವಿಡ್-19 ಹೊಸ ಅಲೆಯ ರೋಗಿಗಳ ಮೇಲೆ ಇದನ್ನು ಪ್ರಯೋಗಿಸಲಾಗಿದ್ದು, ಶೇ.89 ರಷ್ಟು ದಕ್ಷತೆಯಿಂದ ಕೂಡಿದೆ. ಸೆಪ್ಟೆಂಬರ್ ನೊಳಗೆ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಪೂನಾವಾಲಾ ಟ್ವಿಟ್ ಮಾಡಿದ್ದಾರೆ.
ಕೊವಾವಾಕ್ಸ್ ನ್ನು ಈ ವರ್ಷದ ಜೂನ್ ನೊಳಗೆ ಬಿಡುಗಡೆಯಾಗುವ ಸಾಧ್ಯತೆಯಿರುವುದಾಗಿ ಜನವರಿ ತಿಂಗಳಲ್ಲಿ ಪೂನಾವಾಲಾ ಹೇಳಿಕೆ ನೀಡಿದ್ದರು. ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಈಗಾಗಲೇ ಅಸ್ಟ್ರಾ ಜೆನಿಕಾ, ಆಕ್ಸ್ ಪರ್ಡ್ ಕೋವಿಡ್-19 ಲಸಿಕೆ, ಕೋವಿಶೀಲ್ಡ್ ನ್ನು ದೇಶ ಹಾಗೂ ವಿದೇಶಗಳಿಗೆ ಪೂರೈಕೆ ಮಾಡಿದೆ.