ಉಪ್ಪಳ: ಇತ್ತೀಚೆಗೆ ನಿಧನ ಹೊಂದಿದ ಚೇವಾರು ಶಾಲಾ ವ್ಯವಸ್ಥಾಪಕರಾಗಿದ್ದ ಬೀಡುಬೈಲು ನಾರಾಯಣ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಶಾಲೆಯಲ್ಲಿ ಜರಗಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಜೀಜ್ ಚೇವಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್ ಉದ್ಘಾಟಿಸಿ ಮಾತನಾಡಿ ಮೃತರ ಗುಣಗಾನಗೈದರು. ಗ್ರಾ.ಪಂ ಮಾಜಿ ಸದಸ್ಯ ಹರೀಶ್ ಬೊಟ್ಟಾರಿ, ಶಾಲಾ ಮುಖ್ಯಶಿಕ್ಷಕ ಬಿ.ಶ್ಯಾಮ ಭಟ್, ನಿವೃತ್ತ ಬ್ಯಾಂಕ್ ಪ್ರಬಂಧಕ ಪಾವಲುಕೋಡಿ ರವೀಂದ್ರನಾಥ ಭಟ್, ಮಾತೃಸಂಘದ ಅಧ್ಯಕ್ಷೆ ಕವಿತಾ ಪಟ್ಲ, ನಿವೃತ್ತ ಮುಖ್ಯ ಶಿಕ್ಷಕ ಬೀಡುಬೈಲು ಕೃಷ್ಣ ಭಟ್, ಸರಸ್ವತಿ ಟೀಚರ್, ಪ್ರಮೀಳಾ ಟೀಚರ್, ರಾಜೇಶ್ವರಿ ಟೀಚರ್, ಪ್ರೀಮಾ ಕ್ರಾಸ್ತಾ , ಸಾವಿತ್ರಿ ಟೀಚರ್, ಹಾರಿಸ್ ಸಂಸ್ಮರಣೆ ಭಾಷಣ ಮಾಡಿದರು. ವಿನೋದ ಚೇವಾರ್ ಸ್ವಾಗತಿಸಿ, ಪ್ರಸಾದ್ ರೈ ವಂದಿಸಿರು.