ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಜಂಟಿ ಪ್ರವೇಶ ಪರೀಕ್ಷೆ(ಜೆಇಇ ಮುಖ್ಯ)ಯ ಮಾರ್ಚ್ ದಿನಾಂಕಗಳನ್ನು ಪರಿಷ್ಕರಿಸಿದೆ.
ಈ ಮೊದಲು ಮಾರ್ಚ್ 15 ಮತ್ತು ಮಾರ್ಚ್ 18 ರ ನಡುವೆ ಜೆಇಇ ಮುಖ್ಯ ಸೆಷನ್ 2 ಪರೀಕ್ಷೆಗಳನ್ನು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿರ್ಧಾರ ಮಾಡಿತ್ತು. ಆದರೆ ಈಗ ಹೊಸ ಪರಿಷ್ಕರಣೆ ಪ್ರಕಾರ ಇದೇ 16 ರಿಂದ 18 ರವರೆಗೆ ನಡೆಯಲಿದೆ.
ದೇಶಾದ್ಯಂತ ಮತ್ತು ವಿದೇಶಗಳಲ್ಲಿನ ಒಟ್ಟು 331 ನಗರಗಳಲ್ಲಿ 2021 ಮಾರ್ಚ್ 16 ರಿಂದ 18 ರವರೆಗೆ ವಿವಿಧ ಕೇಂದ್ರಗಳಲ್ಲಿ ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ ಎಂದು ಎನ್ ಟಿಎ ತಿಳಿಸಿದೆ.
ಈಗಾಗಲೇ ಜೆಇಇ ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಕಳುಹಿಸಲಾಗಿದ್ದು, ಮಾಹಿತಿಗಾಗಿ jeemain.nta.in ಗಮನಿಸಬಹುದಾಗಿದೆ.